ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನೆಕಿದು ವಾರ್ಡ್ ನಲ್ಲಿ ತೆರವಾದ ಸದಸ್ಯ ಸ್ಥಾನದ ಉಪ ಚುನಾವಣೆ ನಡೆಯಲಿದ್ದು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಈಗಾಗಲೇ ಘೋಷಣೆಯಾಗಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡದೇ ಬಹಿಷ್ಕರಿಸಲು ನಿರ್ಧರಿಸುವುದಾಗಿ ತಿಳಿದುಬಂದಿದೆ.
ನವೆಂಬರ್ 08 ರಂದು ಐನೆಕಿದು ಸಮುದಾಯ ಸಭಾಭವನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರ ಉಪಸ್ಥಿತಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸದೇ ಚುನಾವಣೆ ಬಹಿಷ್ಕರಿಸಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಸೋಮಸುಂದರ ಕೂಜುಗೋಡು, ಗಿರೀಶ್ ಪೈಲಾಜೆ, ಸತೀಶ್ ಕೂಜುಗೋಡು, ಕಿಶೋರ್ ಕುಮಾರ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ನವೀನ್ ಕಟ್ರಮನೆ, ಗುಣವರ್ಧನ ಕೆದಿಲ, ಪವನ್ ಸುಬ್ರಹ್ಮಣ್ಯ, ಜಗದೀಶ್ ಪಡ್ಪು, ಮಧುಸೂದನ್ ಕಾಪಿಕಾಡು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
- Tuesday
- January 28th, 2025