ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಕೊಲ್ಲಮೊಗ್ರ ಗ್ರಾಮ ಗೌಡ ಸಮಿತಿ ಹಾಗೂ ಗೌಡ ಸಮಿತಿಯ ತರುಣ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಎಂದು ತರುಣ ಘಟಕದ ಅಧ್ಯಕ್ಷರಾದ ಸತೀಶ್ ದೋಲನಮನೆ ಹಾಗೂ ತರುಣ ಘಟಕದ ಕಾರ್ಯದರ್ಶಿ ಕೀರ್ತಿಶ್ ಬಾಳೆಬೈಲು ಹೇಳಿಕೆಯಲ್ಲಿ ತಿಳಿಸಿದ್ದಾರೆ
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನವೆಂಬರ್ 15 ಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ದ ಕ ಕರ್ನಾಟಕ ಇದರ ವತಿಯಿಂದ ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಭಟನೆಗೆ ಕೊಲ್ಲಮೊಗ್ರ ಗ್ರಾಮದ ಒಕ್ಕಲಿಗ ಗೌಡ ಸಮುದಾಯ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ. ಗೌರವಾಧ್ಯಕ್ಷ ಅನಂತರಾಮ ಮಣಿಯಾನ, ತರುಣ ಘಟಕದ ಅಧ್ಯಕ್ಷರಾದ ಸತೀಶ್ ದೋಲನಮನೆ ಹಾಗೂ ತರುಣ ಘಟಕದ ಕಾರ್ಯದರ್ಶಿ ಕೀರ್ತಿಶ್ ಬಾಳೆಬೈಲು ಹೇಳಿಕೆಯಲ್ಲಿ ತಿಳಿಸಿದ್ದಾರೆ.