ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಇದರ ಮಹಾಸಭೆಯು ಅಧ್ಯಕ್ಷರಾದ ಮಾಧವ ಬಿಕೆ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 9 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.
2023-2024 ನೇ ವಾರ್ಷಿಕ ವರದಿಯನ್ನು ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಕಾರ್ಯದರ್ಶಿ ಕೆ ಟಿ.ವಿಶ್ವನಾಥ ಸಭೆಗೆ ಮಂಡಿಸಿದರು. ಸದ್ರಿ ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿತು. ಬಳಿಕ, ಗತ ವರ್ಷದ ಕಾರ್ಯಕ್ರಮದ ಅವಲೋಕನ ನಡೆಸಲಾಯಿತು.
2024-2025 ರ ಸಾಲಿಗೆ ಯೋಜಿಸಿದ ನೂತನ ಕಾರ್ಯಕ್ರಮವನ್ನು ಅಂಗೀಕರಿಸಲಾಯಿತು. ನಂತರ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು. ಅಧ್ಯಕ್ಷರಾಗಿ ಬಿ.ಕೆ.ಮಾಧವ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪಂಜದಬೈಲು , ಕೋಶಾಧಿಕಾರಿಯಾಗಿ ಕೊರಗಪ್ಪ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಶರತ್ ಅಡ್ಕಾರ್, ಹರಿಪ್ರಕಾಶ್ ಅಡ್ಕಾರ್, ಬಶೀರ್ ಅಹ್ಮದ್ ಪೈಚಾರ್, ಜತೆ ಕಾರ್ಯದರ್ಶಿ ನಾಸಿರ್ ಶಾಂತಿನಗರ, ಮಿಥುನ್ ಹೇಮಳ , ಗೌರವ ಸಲಹೆಗಾರರಾಗಿ ನಿತ್ಯಾನಂದ ಮುಂಡೋಡಿ, ಜಯಪ್ರಕಾಶ್ ರೈ, ಕೆ.ಟಿ.ವಿಶ್ವನಾಥ, ಹರೀಶ್ ರೈ ಉಬರಡ್ಕ , ದೊಡ್ಡಣ್ಣ ಬರೆಮೇಲು, ಎ.ಸಿ.ವಸಂತ ನಿರ್ದೇಶಕರುಗಳಾಗಿ ವೀರನಾಥ ಬೆಳ್ಳಾರೆ, ರಮೇಶ್ ಕರಂಗಲಡ್ಕ, ಗಣೇಶ್ ಮರ್ಕಂಜ, ತೀರ್ಥವರ್ಣ ಬಳ್ಳಡ್ಕ , ಜಯರಾಮ ಅರಂತೋಡು, ನಿತಿನ್ ಮಜಿಕೋಡಿ, ಮಾಯಿಲಪ್ಪ ಕೊಂಬೆಟ್ಟು, ರಂಗನಾಥ ನಾಗಪಟ್ಟಣ, ಮಂಜುನಾಥ ಪಡ್ಪಿನಂಗಡಿ, ಪ್ರವೀಣ ಸೋಣಂಗೇರಿ, ವಿಶ್ವನಾಥ ಕೆ.ವಿ.ಜಿ ಸುಳ್ಯ, ಇವರುಗಳನ್ನು ಸದಸ್ಯರುಗಳ ಸೂಚನೆ ಮತ್ತು ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಯಿತು, ಮಾಧವ ಬಿ.ಕೆ ಸ್ವಾಗತಿಸಿ, ಉಮೇಶ್ ಪಂಜದ ಬೈಲು ವಂದಿಸಿದರು.