
ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿ ನ.10ರಂದು ಮಹಿಳಾ ಭಾಗವತರಿಂದ ಯಕ್ಷಗಾನ ಗಾನ ವೈಭವ ಹಾಗೂ ಮಕ್ಕಳ ತಂಡದಿಂದ ಸತೀ ಹೈಮಾವತಿ ಯಕ್ಷಗಾನ ಬಯಲಾಟ ನಡೆಯಲಿದೆ. ಮಹಿಳಾ ಭಾಗವತರುಗಳಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಕು ಹೇಮಸ್ವಾತಿ ಕುರಿಯಾಜೆ, ಕು। ರಚನಾ ಚಿದ್ಗಲ್ಲು, ಕು| ಅಭಿಜ್ಞಾ ಭಟ್ ನಾಟಿಕೇರಿ ಇವರುಗಳಿಂದ ಸಂಜೆ 4.30 ರಿಂದ ಯಕ್ಷಗಾನ ಗಾನ ವೈಭವ” ನಡೆಯಲಿದೆ.
ಬಳಿಕ ಸಂಜೆ 6.30ರಿಂದ ಯುವಕ ಮಂಡಲ ಕಳಂಜ ಹಾಗೂ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಜಂಟಿ ಆಶ್ರಯದಲ್ಲಿ ತರಬೇತಿಗೊಂಡ ಮಕ್ಕಳ ಯಕ್ಷಗಾನ ತಂಡದಿಂದ ಸತೀ ಹೈಮಾವತಿ ಯಕ್ಷಗಾನ ಬಯಲಾಟ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ ರವರಿಗೆ ಗೌರವ ಸನ್ಮಾನ ನಡೆಯಲಿದೆ.