Ad Widget

ಪ್ರತಿಭಾನ್ವಿತ ವಿದ್ಯಾರ್ಥಿನಿ ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಶಿಕ್ಷಕರು ಊರವರು

ಉಬರಡ್ಕದ ಸೂಂತೋಂಡು ಬಳಿಯಲ್ಲಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿ ರಚನಾ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕರು ಹಾಗೂ ಊರಿನವರು ಆಸ್ಪತ್ರೆ ಬಳಿ ನೆರೆದಿದ್ದು ಎಲ್ಲರಲ್ಲೂ ಶೋಕ ಮನೆ ಮಾಡಿದೆ.

. . . . . . . . .

ಮೃತಪಟ್ಟ ವಿದ್ಯಾರ್ಥಿನಿ ಹೈಸ್ಕೂಲ್,, ಪಿಯುಸಿಯಲ್ಲಿ ಪ್ರತಿಭಾನ್ವಿತೆಯಾಗಿದ್ದು ಊರಿನಲ್ಲು ಜನರ ಜೊತೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು. ಯಕ್ಷಗಾನ ಕಲೆಯಲ್ಲೂ ತನ್ನ ಪ್ರತಿಭೆ ಪ್ರದರ್ಶಿಸಿದ್ದ ರಚನಾ ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯನ್ನು ಬರೆದಿದ್ದಳು. ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ತೃತೀಯ ಬಿ ಎ (ಇಂಗ್ಲೀಷ್ ಮೇಜರ್) ವಿದ್ಯಾಭ್ಯಾಸ ಮಾಡುತ್ತಿದ್ದಳು.

ಸಹೋದರಿಯರಾದ ರಚನಾ ಮತ್ತು ಅನನ್ಯ ದಿನಂಪ್ರತಿ ಜತೆಯಾಗಿ  ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದರು. ಇಂದು ಯಮರೂಪಿಯಾದ ಬಸ್ ಅಕ್ಕನನ್ನು ಬಲಿ ಪಡೆದರೆ ತಂಗಿ ಕಾಲಿಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವಂತೆ ಮಾಡಿದೆ. ಜತೆಗೆ ಈ  ಘಟನೆ ಮನೆಯವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!