ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮೊರಂಗಲ್ಲು ಮುಖ್ಯ ರಸ್ತೆಯ ಬಳಿ ಇರುವ. ಬಸ್ ನಿಲ್ದಾಣದ ಪರಿಸರ ಕಾಡು ಪೊದೆ ಬಳ್ಳಿ ಗಳಿಂದ ಆವರಿಸಿದ್ದು ಪ್ರಯಾಣಿಕರಿಗೆ ಬಸ್ ನಿಲ್ದಾಣವನ್ನು ಬಳಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೋರಾಗಿ ಮಳೆ ಸುರಿದರೂ. ದಾರಿಹೋಕರಿಗೆ ಆಶ್ರಯಕ್ಕಾಗಿ ನಿಲ್ಲಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಒಳಗೆ ಮರದ ಸಣ್ಣ ಸಣ್ಣ ದಿಮ್ಮಿ ದಾಸ್ತಾನು ಇರಿಸಿದ್ದು ಬಸ್ ನಿಲ್ದಾಣದ ದುರುಪಯೋಗ ವಾಗುತ್ತಿದೆ. ಮಾತ್ರವಲ್ಲದೆ ಕುಡುಕರು ಮದ್ಯಪಾನ ಮಾಡಿದ ಪೊಟ್ಟಣ ,ಬಾಟಲ್, ಗ್ಲಾಸು, ಗುಟ್ಕಾ ಪೊಟ್ಟಣ ಗಳು ಕೂಡ ಕಾಣ ಸಿಗುತ್ತಿದೆ. ಒಟ್ಟಿನಲ್ಲಿ ಈ ಬಸ್ ನಿಲ್ದಾಣ ಪ್ರಯಾಣಿಕರಿಗೆ ಯೋಗ್ಯವೆನಿಸದ ರೀತಿಯಲ್ಲಿ ಕಂಡುಬರುತ್ತಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಬಿಟ್ಟು ಇನ್ನಾದರೂ ಇದರ ಸ್ವಚ್ಛತೆ ಕಾರ್ಯ ನಡೆಸಿ. ಸಾರ್ವಜನಿಕರಿಗೆ ಉಪಯುಕ್ತ ವಾಗುವಂತೆ ಮಾಡಬೇಕಿದೆ.