Ad Widget

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನ 06ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಮರ್ಕಂಜ ರೆಂಜಾಳದ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಿತು.

. . . . . . . . .


ಶಿಬಿರದ ಮೊದಲನೇ ದಿನದ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ನೆರವೇರಿಸಿದರು. ಶಿಬಿರದ ಉದ್ಘಾಟನೆಯನ್ನು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಲೀಲಾಧರ ಡಿ ವಿ ಯವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮರ್ಕಂಜ ಇದರ ಅಧ್ಯಕ್ಷ ರಾದ ಗೀತಾ ಹೊಸೊಳಿಕೆ, ಪುಟ್ಟಣ್ಣ ಗೌಡ ಬಾಣೂರು ಅಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಜಗನ್ಮೋಹನ್ ರೈ ಹೈದಂಗೂರು ಉಪಾಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ನಿಕಟಪೂರ್ವ ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಚಿನ್ನಪ್ಪ ಗೌಡ ಬೇರಿಕೆ ಅಧ್ಯಕ್ಷರು ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ದಾಮೋದರ ಪಟಾಲಿ ಸಂಚಾಲಕರು ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳ,ಕುಮಾರಸ್ವಾಮಿ ನಿಕಟಪೂರ್ವ ಅಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಮಹಾಬಲ ಕಟ್ಟಕೋಡಿ ಸಂಚಾಲಕರು ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ವಿಧ್ಯಾರ್ಥಿ ಕ್ಷೇಮಾಭಿವದ್ಧಿ ಅಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಯೋಜನಾಧಿಕಾರಿಯಾದ ಡಾ. ಪ್ರಮೋದ ಪಿ ಎ, ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಆರ್ಥಿಕ್ ಕೆ ಎಸ್, ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಕುಮಾರಿ ಚೇತನ ಎಂ ಹಾಗೂ ವಿಶ್ವಾಸ್ ಗೌಡ ಇವರುಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಶಿಭಿರಾರ್ಥಿಗಳಾದ ಕು. ಮೀನಾಕ್ಷಿ ಮತ್ತು ಕು. ಕಾವ್ಯ ಇವರು ಪ್ರಾರ್ಥಿಸಿ, ಕು. ಮೇಘನಾ ಸ್ವಾಗತಿಸಿ, ಕು.ಅಮೂಲ್ಯಶ್ರೀ ವಂದಿಸಿದರು. ಕು. ಚಿಂತನ ಹಾಗೂ ಕು. ಶ್ರಾವ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರವು ನ.6 ರಿಂದ ನ.12ರ ತನಕ ಜರುಗಲಿರುವುದು. ಈ ಶಿಬಿರದಲ್ಲಿ ಗ್ರಾಮದ ವಿವಿಧ ಶಾಲೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಆರೋಗ್ಯ ಸಮೀಕ್ಷೆಯನ್ನು ನಡೆಸಲಾಗುವುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading