ಶಾಂತಿ ವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ನಡೆಯುವ ತಾಲೂಕು ಮಟ್ಟದ ಜ್ಞಾನ ದರ್ಶಿನಿ ಮತ್ತು ಜ್ಞಾನ ವರ್ಷಿಣಿ ಮೌಲ್ಯ ಶಿಕ್ಷಣ ಪುಸ್ತಕ ಆಧಾರಿತ ಸ್ಪರ್ಧೆಗಳು ಇಂದು ಅಮೃತ ಭವನ ಸುಳ್ಯ ಇಲ್ಲಿ ಉದ್ಘಾಟನೆಗೊಂಡಿತು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀತಲ್ ಯು ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾ ದ್ಯಾಯಿನಿಯಾದ ಶ್ರೀಮತಿ ಸುನಂದ ಇವರು ಉದ್ಘಾಟಿಸಿದರು. ಶಾಂತಿವನ ಟ್ರಸ್ಟಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ/ ಶಶಿಕಾಂತ್ ಜೈನ್ ಇವರು ಸ್ಪರ್ಧೆಯ ಯೋಜನೆ ಉದ್ದೇಶ ರೂಪುರೇಶೆಯ ಬಗ್ಗೆ ಮಾತನಾಡಿದರು. ತಾಲೂಕು ಯೋಗ ಸಂಘಟಕರಾದ ಶ್ರೀಮತಿ ಮಮತಾ ಮೂಡಿತ್ತಾಯ ಸ್ವಾಗತಿಸಿ ಯೋಗ ಶಿಕ್ಷಕರಾದ ವೆಂಕಟರಾಜ ಇವರು ವಂದಿಸಿದರು. ಶ್ರೀಮತಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು .ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಹಾಗೂ ಶ್ರೀಮತಿ ಧನಲಕ್ಷ್ಮಿ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಪ್ರಕಾಶ್ ಮೂಡಿತ್ತಾಯ ಇವರು ಪಂಚಮುಖಿ ವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ತದನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಅನುಷಾ ಕೆ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ( ಪ್ರಥಮ) ಪ್ರಿಯಾ ಎಂ ಎಸ್ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ದ್ವಿತೀಯ) ಪ್ರಾಪ್ತಿ ಯಂ ಡಿ ಸರಕಾರಿ ಪ್ರೌಢಶಾಲೆ ಮರ್ಕಂಜ (ತೃತೀಯ) ಪ್ರಬಂಧ ಸ್ಪರ್ಧೆಯಲ್ಲಿ ಸಾಕ್ಷಿ ಕೆ ಸರಕಾರಿ ಪ್ರೌಢಶಾಲೆ ಎಣ್ಮೂರು (ಪ್ರಥಮ) ಚಿತ್ರ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ (ದ್ವಿತೀಯ) ಸ್ಮಿತಾ ಕೆ ಸರಕಾರಿ ಪ್ರೌಢಶಾಲೆ ಅಜ್ಜಾವರ (ತೃತೀಯ) ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಅಪ್ರಮೇಯ ಆರ್ ಯು ಸ್ನೇಹ ಪ್ರೌಢಶಾಲೆ ಸುಳ್ಯ (ಪ್ರಥಮ) ಸ್ವಸ್ತಿ ಹೆಚ್ ಆರ್ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ (ದ್ವಿತೀಯ) ವಂದಿತಾ ವಿ ಎಸ್ ರೋಟರಿ ಪ್ರೌಢಶಾಲೆ ಸುಳ್ಯ (ತೃತೀಯ) ಚಿತ್ರಕಲಾ ಸ್ಪರ್ಧೆಯಲ್ಲಿ ಭೂಮಿಕಾ ಕೆ ವಿ ರೋಟರಿ ಪ್ರೌಢಶಾಲೆ, ಸುಳ್ಯ (ಪ್ರಥಮ) ವಿದ್ಯುಲತಾ ಪಿ ಎನ್ ಸ್ನೇಹ ಪ್ರೌಢಶಾಲೆ, ಸುಳ್ಯ (ದ್ವಿತೀಯ) ಶ್ರೇಯ ಎಸ್ ಸರಕಾರಿ ಪ್ರೌಢಶಾಲೆ ಎಣ್ಮೂರು (ತೃತೀಯ)ಪ್ರಾಥಮಿಕ ವಿಭಾಗ ವಿಷ್ಣುಪ್ರಿಯ ಭಟ್. ವಿ .ಎಂ ಜಿ ಎಂ ಶಾಲೆ ಕೊಡಿಯಾಲಬೈಲು ( ಪ್ರಥಮ) ಮುಶೀಫ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ( ದ್ವಿತೀಯ) ವೈಷ್ಣವ್ ಪಿ ಎನ್ ಸ್ನೇಹ ಪ್ರಾಥಮಿಕ ಶಾಲೆ, ಸುಳ್ಯ.( ತೃತೀಯ)
ಪ್ರಬಂಧ ಸ್ಪರ್ಧೆಯಲ್ಲಿ ಪಿ ತನಿಶಾ ಸ.ಹಿ.ಪ್ರಾ ಶಾಲೆ ಮುರುಳ್ಯ ( ಪ್ರಥಮ) ನೀತಾಶ್ರೀ ಕೆ ಆರ್ ಪಿ ಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ( ದ್ವಿತೀಯ ) ಹವ್ಯಶ್ರೀ ಸಂತ ಬ್ರೆಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ( ತೃತೀಯ ) ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಆತ್ಮಿಕ ಜೆ ರೋಟರಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ (ಪ್ರಥಮ) ಅಕ್ಷತಾ ಪಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾ ಜೆ (ದ್ವಿತೀಯ ) ಹೃತಿಕ ಎಂ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಪಂಗಾಯ (ತೃತೀಯ)ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀತನ್ ಪಿ ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಸುಳ್ಯ (ಪ್ರಥಮ) ಅನಿರುದ್ಧ ಪಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ದ್ವಿತೀಯ) ಸಿ ಡಿ ತನುಜ್ಞ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು (ತೃತೀಯ) ಬಹುಮಾನವನ್ನು ಪಡೆದಿರುತ್ತಾರೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ಬೆಳ್ತಂಗಡಿ ತಾಲೂಕಿನ ಪುಂಜಾಲ್ಗಟ್ಟೆ ಶಾಲೆಯಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.