ಮೈಸೂರಿನಿಂದ ಮಂಗಳೂರಿಗೆ ಕೈದಿಯೋರ್ವ ಕರೆದೊಯ್ಯುತ್ತಿದ್ದ ವೇಳೆ ಸುಳ್ಯ ಓಡಬಾಯಿ ಸಮೀಪ ಪೋಲೀಸರಿಂದ ತಪ್ಪಿದಿ ಓಡಿದ ಘಟನೆ ನ.3ರಂದು ಸಂಜೆ ವರದಿಯಾಗಿದೆ.
ಇತರರ ಖಾತೆಯನ್ನು ಹ್ಯಾಕ್ ಮಾಡಿ ಕೋಟ್ಯಾಂತರ ವಂಚನೆ ಮಾಡಿದ ಪ್ರಕರಣದ ಆರೋಪಿಯಯನ್ನು ಮಂಗಳೂರಿಗೆ ಕರೆದೊಯ್ಯುವ ವೇಳೆ ಸುಳ್ಯ ಒಡಬಾಯಿ ಸಮೀಪ ಹೋಟೇಲ್ ನಲ್ಲಿ ಚಾ ಕುಡಿದು ಕೈ ತೊಳೆಯುವ ವೇಳೆ ಮೈಸೂರು ಕ್ರೈಂ ಪೋಲೀಸರ ಕೈಯಿಂದ ತಪ್ಪಿಸಿ ಓಡಿದನೆನ್ನಗಲಾಗಿದೆ.
ಹೋಟೇಲ್ ನಿಂದ ಓಡಿ ಹೊಳೆಗೆ ಹಾರಿದ ಆತ ಈಜಿ ದೊಡ್ಡೇರಿ ಕಡೆಗೆ ಹೋಗಿದ್ದಾನೆ. ಬಟ್ಟೆಯಲ್ಲಿ ಕೆಸರು ನೀರು ಆಗಿರುವುದನ್ನು ಕಂಡು ಹತ್ತಿರದ ಮನೆಯವರಿಗೆ ಆತನ ಬಗ್ಗೆ ಸಂಶಯ ಬಂದು ಅಲ್ಲಿ ಆಟವಾಡುತ್ತಿದ್ದ ಯುವಕರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರೆಲ್ಲಾ ಸೇರಿ ಆತನನ್ನು ಹಿಡಿದು ವಿಚಾರಿಸುತ್ತಿದ್ದಾಗ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ವಿಚಾರ ಬೆಳಕಿಗೆ ಬಂತೆನ್ನಲಾಗಿದೆ. ಆ ವೇಳೆಗೆ ಸ್ಥಳಕ್ಕೆ ಮೈಸೂರು ಪೋಲೀಸರು ಕೂಡ ಆಗಮಿಸಿದ್ದು ಸ್ಥಳೀಯರ ನೆರವಿನಿಂದಾಗಿ ಆತನ್ನು ವಶಕ್ಕೆ ಪಡೆದು ಸಹಕಾರ ನೀಡಿದ ಊರವರಿಗೆ ಪೋಲೀಸರು ಕೃತಜ್ಣತೆ ಸಲ್ಲಿಸಿ ತೆರಳಿದರೆಂದು ತಿಳಿದುಬಂದಿದೆ.