ಪ್ರತಿ ವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ದೀಪಾವಳಿ ಆಚರಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಈ ವರ್ಷ ಅಡ್ಕಾರ್ ನ ವನಸುಮ ವನವಾಸಿ ವಿದ್ಯಾರ್ಥಿ ನಿಲಯದ ವನವಾಸಿ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ವನವಾಸಿ ವಿದ್ಯಾರ್ಥಿಗಳೊಂದಿಗೆ ಹೂವಿನ ಆಕರ್ಷಕ ರಂಗೋಲಿ ರಚಿಸಿ ದೀಪಗಳನ್ನು ಹಚ್ಚಿದರು. ಬಳಿಕ ವನವಾಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಸಹಭೋಜನ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಷ್ಟ್ರಸೇವಿಕ ಸಮಿತಿ ಸದಸ್ಯೆ ಶ್ರೀದೇವಿ ನಾಗರಾಜ ಭಟ್, ಕೃಷಿಕ ಶ್ರೀನಿವಾಸ ಉಬರಡ್ಕ, ಮಂಡೆಕೋಲು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ಸಾವಿತ್ರಿ ಕಣೆಮರಡ್ಕ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಕೈಲಾಸ್, ವೀರಮ್ಮ, ಜ್ಞಾನದೀಪ ಎಜ್ಯುಕೆಶನಲ್ ಟ್ರಸ್ಟ್ ನ ಟ್ರಸ್ಟ್ ನ ಟ್ರಸ್ಟಿ ಸಂಜಯ್ ನೆಟ್ಟರ್ ಉಪಸ್ಥಿತರಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮಂಜುಶ್ರೀ, ಶಿಕ್ಷಕಿ ಗೀತಾ ಬಾಲಚಂದ್ರ, ಸಂತೋಷ್ ಕೊಡಿಯಾಲ ಸಹಕರಿಸಿದರು.
- Tuesday
- January 28th, 2025