Ad Widget

ಮಂಡೆಕೋಲು ಗ್ರಾ. ಪಂ. ಗ್ರಂಥಾಲಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಆಚರಣೆ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಆಚರಣೆ ನಡೆಯಿತು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರುಗಳು ಯೋಗೀಶ್ ಶರ್ಮಾ, ಸುರೇಶ್ ಕಣೆಮರಡ್ಕ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ‌ ಮುಖ್ಯೋಪಾಧ್ಯಾಯರು ಸುರೇಖಾ ಮೇಡಂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಸರ್ ಉಪಸ್ಥಿತರಿದ್ದರು, ಕನ್ನಡ ಗೀತಾ...

ಪಂಜ : ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ – ಪರಿವಾರ ಪಂಜ ಪ್ರಥಮ

ಗರಡಿ ಕ್ರಿಕೆಟರ್ಸ್ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಕಪ್ 2024 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಲಾಯಿತು.ಪಂದ್ಯಾಟವನ್ನು ಅನುರಾಜ್ ಉದ್ಘಾಟಿಸಿದರು ಈ ಸಂದರ್ಭದಲ್ಲಿ ರವಿ ಬಿ ನಾಗತೀರ್ಥ ,ಚರಣ್ ಕಕ್ಯಾನ ಉಪಸ್ಥಿತರಿದ್ದರು. ಪ್ರಥಮ ಬಹುಮಾನವನ್ನು ಕೃತಿಕ್ ಬೇರ್ಯ ನಾಯಕತ್ವದ ಪರಿವಾರ ಪಂಜ ತಂಡ ಹಾಗೂ ದ್ವಿತೀಯ ಬಹುಮಾನವನ್ನು...
Ad Widget

ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಿಂದ ಅಡ್ಕಾರ್ ನ ವನವಾಸಿ ವಿದ್ಯಾರ್ಥಿಗಳೊಂದಿಗೆ ದೀಪಾವಳಿ ಆಚರಣೆ

ಪ್ರತಿ ವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ದೀಪಾವಳಿ ಆಚರಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಈ ವರ್ಷ ಅಡ್ಕಾರ್ ನ ವನಸುಮ ವನವಾಸಿ ವಿದ್ಯಾರ್ಥಿ ನಿಲಯದ ವನವಾಸಿ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ವನವಾಸಿ ವಿದ್ಯಾರ್ಥಿಗಳೊಂದಿಗೆ ಹೂವಿನ ಆಕರ್ಷಕ ರಂಗೋಲಿ ರಚಿಸಿ ದೀಪಗಳನ್ನು ಹಚ್ಚಿದರು. ಬಳಿಕ ವನವಾಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ...

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ – ತೀರ್ಥರಾಮ ಎಚ್. ಬಿ ಯವರಿಗೆ ಸನ್ಮಾನ

ಗುತ್ತಿಗಾರು ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ತೀರ್ಥರಾಮ ಎಚ್. ಬಿ ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತಿ ಹೊಂದಿದ್ದರು. ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ...

ಅಜ್ಜಾವರದಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಇದರ ನೇತೃತ್ವದಲ್ಲಿ ನ. 3 ರಂದು ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ ಬಯಂಬು ಇಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಅಜ್ಜಾವರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ  ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ದೀಪ ಪ್ರಜ್ವಲಿಸುವ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ...

ಐನೆಕಿದು : ನವಗ್ರಾಮ ದಲ್ಲಿ ಲಯನ್ಸ್ ಕ್ಲಬ್ ವತಿಯಿಂದ “ಲಯನ್ ತುಡರ್” ದೀಪಾವಳಿ ಆಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.01 ರಂದು ಐನೆಕಿದು ನವಗ್ರಾಮ ದಲ್ಲಿ “ಲಯನ್ ತುಡರ್” ದೀಪಾವಳಿ ಆಚರಣೆ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಜೇಶ್.ಎನ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಝೋನ್ 2ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ...

ಕಥೆ : ಬದುಕುವ ಹಕ್ಕು…

ಒಂದು ಊರಿನಲ್ಲಿ ರಾಜು ಎಂಬೊಬ್ಬ ಯುವಕನಿದ್ದ. ಆತನಿಗೆ ಪ್ರಾಣಿ-ಪಕ್ಷಿಗಳೆಂದರೆ ಅತೀವ ಪ್ರೀತಿ. ವಿಧವಿಧವಾದ ಪ್ರಾಣಿ-ಪಕ್ಷಿಗಳ ಛಾಯಾಚಿತ್ರವನ್ನು ಸೆರೆಹಿಡಿದು ಸಂಗ್ರಹಿಸುವುದು ಆತನ ಹವ್ಯಾಸವಾಗಿತ್ತು.ಹೀಗೊಂದು ದಿನ ರಾಜು ತನ್ನ ಮನೆಯ ಎದುರಿನ ತೋಟದಲ್ಲಿ ಸಂಚರಿಸುತ್ತಿದ್ದಾಗ ಅಲ್ಲೊಂದು ಗಿಡದಲ್ಲಿ ಗುಬ್ಬಚ್ಚಿ ಪಕ್ಷಿ ಕಾಣಿಸಿತು. ಚಿಕ್ಕದಾಗಿ ಮುದ್ದುಮುದ್ದಾಗಿದ್ದ ಆ ಗುಬ್ಬಚ್ಚಿಯನ್ನು ನೋಡಿದ ರಾಜುವಿಗೆ ಅದನ್ನು ಸಾಕುವ ಮನಸ್ಸಾಯಿತು. ಹಾಗಾಗಿ ಆತನು ಅದನ್ನು...

ಮೂಲ ಸಂಪ್ರದಾಯ ಆಚರಣೆ ಉಳಿಸಲು ಗೌಡ ಮಹಿಳಾ ಘಟಕದಿಂದ ಬಲೀಂದ್ರ ಅಲಂಕಾರ ಸ್ಪರ್ಧೆ .

ಸುಳ್ಯ ಗೌಡ ಮಹಿಳಾ ಘಟಕದ ವತಿಯಿಂದಲೂ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ ಸುಳ್ಯ, ದೀಪಾವಳಿ ಹಬ್ಬ ಆಚರಣೆ ತುಳುನಾಡಿನಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತ ಬಂದಿದೆ. ಹಿಂದಿನ ಸಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಇಂದಿಗೂ ಗ್ರಾಮೀಣ ಭಾಗದಲ್ಲಿ ಆಚರಿಸಲಾಗುತ್ತದೆ. ಗೋಪೂಜೆ, ಬಲಿಯೇಂದ್ರ ಪೂಜೆ ಮೊದಲಾದವು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ...

ಸಾಹಿತಿ ಭೀಮರಾವ್ ವಾಷ್ಠರ್ ರಾಷ್ಟ್ರೀಯ ಅಹಿಂದ ಕಲಾವಿದರ ಒಕ್ಕೂಟದ ದ ಕ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ಸುಳ್ಯದ ಕವಿ, ಸಾಹಿತಿ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಬೆಂಗಳೂರಿನ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಷ್ಟ್ರೀಯ ಅಹಿಂದ ಕಲಾವಿದರ ಒಕ್ಕೂಟದ ದ ಕ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಗಾಯಕ, ಚಿತ್ರ ನಿರ್ದೇಶಕ,ಜ್ಯೋತಿಷಿ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ರವರು ಸುಳ್ಯದಲ್ಲಿ 22 ವರ್ಷಗಳಿಂದ ಖಾಯಂ ನೆಲೆಸಿ ಸಂಗೀತ, ಸಾಹಿತ್ಯ, ಜ್ಯೋತಿಷ್ಯ, ಚಲನಚಿತ್ರ,...

ಶಾಂತಿನಗರ ಶಾಲೆಯ ನೂತನ ಎಸ್.ಡಿ.ಎಂ.ಸಿ. ರಚನೆ – ಅಧ್ಯಕ್ಷರಾಗಿ ಮಹಮ್ಮದ್ ನಝೀರ್ ಶಾಂತಿನಗರ ಪುನರಾಯ್ಕೆ

ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ SDMC ರಚನೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಮಹಮ್ಮದ್ ನಝೀರ್ ಶಾಂತಿನಗರ ಇವರನ್ನು ಪುನರಾಯ್ಕೆ ಮಾಡಲಾಯಿತು‌ ಹಾಗೂ ಉಪಾಧ್ಯಕ್ಷರಾಗಿ ಶೀಮತಿ ಶಶಿಕಲಾ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಪ್ರಮೀಳಾ, ಜಯಂತಿ,ಶೀಲಾವತಿ, ದೇವಕಿ,ದೇವಿಪ್ರಸಾದ್, ಸಿದ್ದಿಕ್, ನೂರುದ್ದೀನ್, ಇಬ್ರಾಹಿಂ ಎಸ್ ಎ, ಸಿದ್ದೀಕ್, ಬುಶ್ರಾ, ಸೆಮಿನಾ, ಅಪ್ಸ, ವಿಶ್ವನಾಥ,...
Loading posts...

All posts loaded

No more posts

error: Content is protected !!