- Thursday
- November 21st, 2024
ಅರಂತೋಡು ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಆಲ್ಟೋ ಕಾರೊಂದು ಢಿಕ್ಕಿಯಾದ ಘಟನೆ ಇಂದು ರಾತ್ರಿ ನಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಕಾಲು ಮುರಿತವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಲ್ಟೋ ಕಾರಿಗೆ ಸೂಕ್ತ ದಾಖಲೆಗಳಿಲ್ಲದೇ ಚಲಾಯಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಲ್ಲುಗುಂಡಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದ ರಥಬೀದಿಯಲ್ಲಿರುವ ಬೃಹತ್ ಎಲೆಕ್ಟ್ರಿಕಲ್ ಅಂಗಡಿ ಮಹಾಲಕ್ಷ್ಮಿ ಎಲೆಕ್ಟ್ರಿಕಲ್ಸ್ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಚಕರಾದ ಗೋಪಾಲ ಭಟ್ ನೇತೃತ್ವದಲ್ಲಿ ಲಕ್ಷ್ಮಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆ ಹಾಗೂ ಗಣ ಹೋಮ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಂಜೀವ ನಾಯಕ್ ಹಾಗೂ ಇವರ ಪುತ್ರರಾದ ಸಂದೀಪ್ ನಾಯಕ್ ಮತ್ತು ಕುಟುಂಬಸ್ಥರು ಬಂಧು...
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋಕುಲ್ ದಾಸ್ ರಿಗೆ ಅದ್ದೂರಿ ಸ್ವಾಗತ , ಸನ್ಮಾನ ಸ್ವೀಕರಿಸಿ ಮೊದಲ ಮಾತು
ಸುಳ್ಯ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಾನಾ ಸ್ತರಗಳಲ್ಲಿ ವಿಶಿಷ್ಟ ಸಾಧನೆ ಗೈದವರನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿ ನೀಡುತ್ತಿದ್ದು, ಈ ಭಾರಿ ವಿಶೇಷವಾಗಿ ಸಮಾಜ ಸೇವೆ ಎಂದು ಪರಿಗಣಿಸಿ ಗೌರವಾಧ್ಯಕ್ಷರಾದ ಕೆ ಗೋಕುಲ್ ದಾಸ್ ರವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನವರು ಪ್ರಶಸ್ತಿ ಪ್ರಧಾನ ಮಾಡಿದರು . ಈ ಸಂಧರ್ಭದಲ್ಲಿ ಪ್ರಶಸ್ತಿ ದೊರೆಯಲು...
ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ ಸದಾ ಪಾದರಸದಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು...
ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ ಸದಾ ಪಾದರಸದಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು...
ಸುಳ್ಯ:ನವೆಂಬರ್01: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ "ಒಲವಿನ ಕರ್ನಾಟಕ" ಎಂಬ ಧ್ಯೇಯ ವಾಕ್ಯದಡಿ ಧ್ವಜಾರೋಹಣ ಕಾರ್ಯಕ್ರಮವು ಸುಳ್ಯದ ಗಾಂಧಿನಗರದ ಪಕ್ಷದ ಕಚೇರಿಯ ಮುಂಭಾಗದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಸಮಿತಿಯ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ರವರು ಧ್ವಜಾರೋಹಣಗೈದರು. ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ...
ಬೆಳ್ಳಾರೆಯ ಮುಖ್ಯರಸ್ತೆ ಬಳಿಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯು 14ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಪ್ರಯುಕ್ತ ಸಂಸ್ಥೆಯಲ್ಲಿ ನ.01ರಂದು ಗಣಹೋಮ, ಲಕ್ಷ್ಮೀಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ ಹಾಗೂ ಪ್ರಸಾದ್ ಆಚಾರ್ಯ ಬೆಳ್ಳಾರೆ ಮತ್ತು ಮನೆಯವರು ಹಾಗೂ ಸಂಸ್ಥೆಯ ಸಿಬ್ಬಂದಿ...
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ನ.01ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಕುತ್ತು, ಭರತ್ ಪಂಜಿಗಾರು, ಮಿಥುನ್ ಗೌರಿಹೊಳೆ, ಹಿಮಾಂಶು ಕುಂಟಿಕಾನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಡಪ್ಪಾಡಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ , ಕಸ್ತೂರಿ ರಂಗನ್ ವರದಿಯ ವಿರುದ್ಧ , ಪಿಡಿಓ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ಕಿಶೋರ್ ಶಿರಾಡಿಯವರು ಭಾಗವಹಿಸಿ , ವರದಿಯ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸದಸ್ಯರಾದ ಚಂದ್ರಶೇಖರ ಬಾಳುಗೋಡು ಉಪಸ್ಥಿತರಿದ್ದರು. ಗ್ರಾಮ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಾಲೇಜಿನ ಷಷ್ಠ್ಯಬ್ದ ರಂಗಮಂದಿರದಲ್ಲಿ ಆಚರಿಸಲಾಯಿತು. ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ., ಆಂತರಿಕ ಗುಣಮಟ್ಟ...
Loading posts...
All posts loaded
No more posts