Ad Widget

ವಿಧಾನ ಪರಿಷತ್ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಆಯ್ಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಯನ್ನು ಘೋಷಿಸಿದೆ. ವಿಧಾನ ಪರಿಷತ್ತಿನ ಉಪಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಯಾಗಿ ರಾಜು ಪೂಜಾರಿರನ್ನು ಆಯ್ಕೆ ಮಾಡಿದೆ.

ಹಳೆಗೇಟು : ಸ್ವಚ್ಛತಾ ಕಾರ್ಯಕ್ರಮ

ಗಾಂಧಿ ಜಯಂತಿ ಅಂಗವಾಗಿ ಸುಳ್ಯ ನಗರದಾದ್ಯಂತ ನಡೆದ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಹಳೆಗೇಟು ಭಾಗದ ಸ್ವಚ್ಚತಾ ಕಾರ್ಯಕ್ರಮವು ಹೊಸಗದ್ದೆ ಶ್ರೀ ಚೆನ್ನಕೇಶವ ದೇವರ ಕಟ್ಟೆಯಿಂದ ಪ್ರಾರಂಭಿಸಿ ನಿಸರ್ಗ ಇಂಡಸ್ಟ್ರಿ ವಠಾರ ಮತ್ತು ಹಳೆಗೆಟು ಜಂಕ್ಷನ್ ನವರೆಗೆ ನಡೆಯಿತು. ನ. ಪಂ. ಉಪಾಧ್ಯಕ್ಷ ಬುದ್ಧ ನಾಯ್ಕ್, ಸುಳ್ಯ ಸಿ ಎ ಬ್ಯಾಂಕ್ ನಿರ್ದೇಶಕರಾದ ಕೇಶವ ಮಾಸ್ಟರ್ ಹೊಸಗದ್ದೆ,...
Ad Widget

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ: ಗಾಂಧಿ ಜಯಂತಿ ಮತ್ತು ಶಾಸ್ತ್ರೀ ಜಯಂತಿ ಆಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಗಾಂಧೀ ಜಯಂತಿ ಮತ್ತು ಶಾಸ್ತ್ರೀ ಜಯಂತಿ ಕಾರ್ಯಕ್ರಮಯನ್ನು ಆಚರಿಸಲಾಯಿತು. ವಿದ್ಯಾಬೋಧಿನೀ ಸ್ಕೌಟ್ಸ್ - ಗೈಡ್ಸ್ ದಳದಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯುಇವರು ಅಧ್ಯಕ್ಷತೆಯನ್ನು ವಹಿಸಿ ಗಾಂಧೀಜಿ ಮತ್ತು ಶಾಸ್ತ್ರೀಯವರ ಸಾಧನೆಗಳನ್ನು ನೆನಪಿಸಿಕೊಂಡು ಸರ್ವಧರ್ಮ ಪ್ರಾರ್ಥನೆಯ ಮಹತ್ವವನ್ನು ತಿಳಿಸುತ್ತಾ, ದೇಶದ ಸಮಗ್ರತೆಗೆ...

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಗಾಂಧಿ ಜಯಂತಿ ಆಚರಣೆ, ಸ್ವಚ್ಛತೆ ಹಾಗೂ ಬೀದಿ ನಾಟಕ

ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದಿನಾಂಕ 2.10.20204 ರಂದು ಗಾಂಧಿ ಜಯಂತಿಯ ಪ್ರಯುಕ್ತ, ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತದನಂತರ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟಂತೆ ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ದೇವಳದ ಕಾರ್ಯನಿರ್ವಹಣಾಧಿಕಾರಿಗಳು, ಸಹ...

ಸುಳ್ಯ : ಗಾಂಧಿ ಜಯಂತಿ ಅಂಗವಾಗಿ ಅಮರ ಸಂಘಟನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ದ್ವೇಯದಡಿಯಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿ ರಿ, ನಗರ ಪಂಚಾಯ‌ರ್ ಸುಳ್ಯ, ತಾಲ್ಲೂಕು ಕಛೇರಿ, ತಾಲೂಕು ಪಂಚಾಯತ್ ಸುಳ್ಯ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ,ಅರಕ್ಷಕ ಠಾಣೆ ಸುಳ್ಯ, ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಸುಳ್ಯ, ಸಾಮಾಜಿಕ ಅರಣ್ಯ ವಲಯ ಸುಳ್ಯ,ವಕೀಲರ ಸಂಘ ಸುಳ್ಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ...

ನೋಟಿಸ್ ನೀಡಲು ಆರಂಭಿಸಿದ ಬಳಿಕವು ಎಚ್ಚೆತ್ತುಕೊಂಡಿಲ್ಲ ವಾಹನ ಸವಾರರು – ಮತ್ತೆ ಮತ್ತೆ ನಿಯಮ ಉಲ್ಲಂಘನೆ!

ಸುಳ್ಯ : ಸುಳ್ಯ ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಇದನ್ನು ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿ ನ್ಯಾಯಲಯದಲ್ಲಿ ದಂಡ ಕಟ್ಟುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು. ಸುಳ್ಯದ ರಾಮ ಭಜನಾ ಮಂದಿರದ ಮುಂಭಾಗದಲ್ಲಿ ಕೆಲ ವಾಹನ ಸವಾರರು ಪಾರ್ಕಿಂಗ್ ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು, ಸರತಿ ಸಾಲಿನಲ್ಲಿ ಮೂರು ಕಾರುಗಳು...

ವಳಲಂಬೆ: ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಗಾಂಧಿ ಜಯಂತಿ ಪ್ರಯುಕ್ತ ಸ್ತ್ರೀಶಕ್ತಿ ಸಂಘ ವಳಲಂಬೆ, ಸಂಜೀವಿನಿ ಸಂಘ ವಳಲಂಬೆ, ಅಂಗನವಾಡಿ ಪೋಷಕ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘದವರು ಜಂಟಿಯಾಗಿ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಚ್ಛತಾ ಕಾಯಕ್ರಮಕ್ಕೆ ಉಪಾಹಾರವನ್ನು ಚಂದ್ರಾವತಿ ಅಂಗನವಾಡಿ ಕಾಯಕರ್ತೆ, ಜೀವನ್ ದಂಬೆಕೋಡಿ, ಮತ್ತು ಚೈತನ್ಯ ವಳಲಂಬೆ ಇವರು ನೀಡಿ ಸಹಕರಿಸಿದರು.

ಉಬರಡ್ಕ : ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ವತಿಯಿಂದ ಉಬರಡ್ಕ ಬಸ್ ತಂಗುದಾಣ ಸ್ವಚ್ಛತೆ ಮತ್ತು ಉಬರಡ್ಕ ಪಂಚಾಯತ್ ನವರೊಂದಿಗೆ ಸೇರಿಕೊಂಡು ಉಬರಡ್ಕ ಪೇಟೆಯಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಗಾಂಧಿಜಯಂತಿ ಪ್ರಯುಕ್ತ ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ – ಹೈಸ್ಕೂಲ್ ವಿಭಾಗದಲ್ಲಿ ಆಲೆಟ್ಟಿಯ ಪೂರ್ವಿಕಾ ಕೆ.ವಿ. ಪ್ರಥಮ

ದ.ಕ.ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.‌ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಆಲೆಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಿಕಾ ಕೆ.ಎಲ್. ಅವರು ಮಂಡಿಸಿದ ಪ್ರಬಂಧಕ್ಕೆ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ದೊರೆತಿದೆ.

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ – ಪದವಿ ಪೂರ್ವ ವಿಭಾಗದಲ್ಲಿ ಗುತ್ತಿಗಾರಿನ ಕು.ಶ್ರೀಪೂರ್ಣ ಪ್ರಥಮ

ದ.ಕ.ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.‌ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿನಿ ಗುತ್ತಿಗಾರಿನ ಶ್ರೀಪೂರ್ಣ ಜಿ.ಎಲ್. ಅವರು ಮಂಡಿಸಿದ ಪ್ರಬಂಧಕ್ಕೆ ಜಿಲ್ಲಾ ಮಟ್ಟದ ಪ.ಪೂ.ವಿಭಾಗಲ್ಲಿ ಪ್ರಥಮ ಸ್ಥಾನ ದೊರೆತಿದ್ದು, ಜಿಲ್ಲಾಧಿಕಾರಿಯರಿಂದ ಬಹುಮಾನ ಪಡೆದುಕೊಂಡರು. ಈಕೆ ಧಾರ್ಮಿಕ ಪರಿಷತ್ ಸದಸ್ಯರಾದ ಗುತ್ತಿಗಾರು ಗ್ರಾಮದ ಲಕ್ಷ್ಮೀಶ ಗಬ್ಲಡ್ಕ ಹಾಗೂ ಕುಮುದಾ ರವರ ಪುತ್ರಿ.
Loading posts...

All posts loaded

No more posts

error: Content is protected !!