Ad Widget

ಅವನೊಬ್ಬ ಅನಾಮಿಕ, ಬದುಕಿನ ಕಷ್ಟ-ನೋವುಗಳಲ್ಲಿ ಮಿಂದೆದ್ದ ನಾವಿಕ…

ತನ್ನ ಮನದ ನೋವುಗಳ ಇತರರಿಂದ ಮುಚ್ಚಿಡುವ ಆ ವ್ಯಕ್ತಿಯು ತನ್ನ ಕನಸಿನಲ್ಲೂ ಕೂಡ ಕಣ್ಣೀರ ಸುರಿಸುವನು, ನಾಲ್ಕು ಜನರ ಮಧ್ಯೆ ಮಾತ್ರ ನಗುನಗುತ್ತಾ ಬದುಕುವನು…ನಿದ್ರೆಯಿಲ್ಲದೇ ಅದೆಷ್ಟೋ ರಾತ್ರಿಗಳ ಕಳೆದಿರುವನು ಅವನು, ನಾಳೆಗಳ ಯೋಚನೆಯಲ್ಲಿ ಕೊರಗಿ ಕರಗಿರುವನು ಅವನು, ಏಕಾಂಗಿಯಾಗಿ ಅತ್ತು ತನ್ನ ಮನದ ನೋವುಗಳಿಗೆ ತಾನೇ ಔಷಧಿಯ ನೀಡುವನು ಅವನು…ಎಲ್ಲರ ಮನಸ್ಸಿನ ನೋವುಗಳೇ ಅವನಲ್ಲೂ, ಎಲ್ಲರ...

ಗುತ್ತಿಗಾರು : ಸಾಮಾಜಿಕ ಅರಣ್ಯೀಕರಣ ಮತ್ತು ಹಣ್ಣು ಹಂಪಲು ಗಿಡಗಳ ನೆಡುವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಶೌಯ೯ ವಿಪತ್ತು ನಿರ್ವಹಣಾ ಘಟಕ ಗುತ್ತಿಗಾರು ಹಾಗೂ ಅರಣ್ಯ ಇಲಾಖೆಯವರ ಜೊತೆಗೂಡಿ ಸಾಮಾಜಿಕ ಅರಣೀಕರಣದ ಕಾರ್ಯಕ್ರಮದಲ್ಲಿ 250 ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮವನ್ನು ಶ್ರೀ ಕೃಷ್ಣಾ ಭಜನಾ ಮಂದಿರದ ವಠಾರ ಮತ್ತು ಪಿ. ಎಂ. ಶ್ರೀ ಸರಕಾರಿ ಮಾದರಿ ಹಿರಿಯ...
Ad Widget

ಕೊಲ್ಯ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಸಾವಿತ್ರಿ ಕಣೆಮರಡ್ಕ ಅವರಿಗೆ ಸನ್ಮಾನ

ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಮಧುಸೂದನ್ ಅಯರ್ ಅವರ ನೇತೃತ್ವದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮ ದಲ್ಲಿ ಗ್ರಂಥಾಲಯ ಸೇವೆಯನ್ನು ಗುರುತಿಸಿ ಮಂಡೆಕೋಲು ಗಂಥಾಲಯ ಮೇಲ್ವಿಚಾರಕರಾದ ಸಾವಿತ್ರಿ ಕಣೆಮರಡ್ಕ ಅವರನ್ನು ಸನ್ಮಾನಿಸಲಾಯಿತು.

ಅರಂತೋಡು : ಸ್ಕೂಟಿ ಹಾಗೂ ಕಾರು ಅಪಘಾತ – ಸವಾರನಿಗೆ ಗಾಯ

ಸುಳ್ಯದಿಂದ ಮಡಿಕೇರಿ ಗೆ ಹೋಗುವ ಕಾರು ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಸ್ಕೂಟಿ ಮಧ್ಯೆ ಅರಂತೋಡಿನಲ್ಲಿ ಅಪಘಾತ ಸಂಭವಿಸಿದ ಇದೀಗ ವರದಿಯಾಗಿದೆ. ಸ್ಕೂಟಿ ಸವಾರನಿಗೆ ಗಾಯಗಳಾಗಿದ್ದು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಅರಂತೋಡು : ವಿಷ ಸೇವಿಸಿದ್ದ ಕಾರು ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು

ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಾರು ಚಾಲಕ ಶೇಷಪ್ಪ ಗೌಡ ಚಿಕಿತ್ಸೆ ಫಲಿಸದೆ ಅ.12 ರಂದು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಳ್ಯ, ಅರಂತೋಡು ಭಾಗದಲ್ಲಿ ಅಂಬಾಸಿಡರ್ ಕಾರು ಚಾಲಕರಾಗಿ ಚಿರಪರಿಚಿತರಾಗಿದ್ದರು. ಪಾಲ್ತಾಡಿನಶೇಷಪ್ಪ ಗೌಡ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯದ ಕೆವಿಜಿ...

ಅರಂತೋಡು : ಮಾತೃ ಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ

ವಿಶ್ವ ಹಿಂದೂಪರಿಷದ್ ಭಜರಂಗದಳ ಮಾತೃ ಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಹನುಮಾನ್ ಶಾಖೆ ಅರಂತೋಡು ಇದರ ನೂತನ ಮಾತೃ ಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ ಕಾರ್ಯಕ್ರಮ ಅ.12ರಂದು ಆರಂತೋಡು ರಬ್ಬರ್ ಹಾಲು ಉತ್ಪಾದಕರ ಸಹಕಾರಿ ಸಂಘ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು ವಹಿಸಿದ್ದರು. ವೇದಿಕೆ ಯಲ್ಲಿ ಸುಳ್ಯ ಪ್ರಖಂಡ ಅಧ್ಯಕ್ಷರಾದ...

ಸುಳ್ಯದ ಮಹಿಳಾ ದಸರಾದಲ್ಲಿ  ಜನರನ್ನು ಆಕರ್ಷಿಸುತ್ತಿದೆ ಚೈತ್ರ ಯುವತಿ ಮಂಡಲದ ಸ್ಟಾಲ್

ಸುಳ್ಯ ಮಹಿಳಾ ದಸರಾದ  ಅಂಗವಾಗಿ ಮಹಿಳೆಯರಿಗೆ   ನೀಡಿರುವ ಸ್ಟಾಲ್ ಗಳಲ್ಲಿ ಕೆಲವೊಂದು ಗೃಹ ಸಲಕರಣೆಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಇಲ್ಲಿ ಅಜ್ಜಾವರದ ಚೈತ್ರ ಯುವತಿ ಮಂಡಲದ ವತಿಯಿಂದ 10 ನೇ ಕೌಂಟರ್ ನಲ್ಲಿ ತೆರೆಯಲಾದ ಸ್ಟಾಲ್ ನಲ್ಲಿ ಹಳ್ಳಿಯ ಮತ್ತು ಪಾರಂಪರಿಕ ಆಹಾರ ಸಾಮಾಗ್ರಿ ಮತ್ತು ಪರಿಸರ ಸ್ನೇಹಿ...

ಎನ್ ಕೆ ಅಸೋಸಿಯೇಟ್ಸ್ ಸ್ಥಳಾಂತರಗೊಂಡು ನೂತನ ಕಛೇರಿಯಲ್ಲಿ ಶುಭಾರಂಭ

ಖ್ಯಾತ ನ್ಯಾಯವಾದಿ ನಾರಾಯಣ ಕೆ ಇವರ ಕಛೇರಿಯು ಸ್ಥಳಾಂತರಗೊಂಡು ಕೆವಿಜಿ ವೃತ್ತ ಕ್ಯಾಂಪಸ್ ಬಳಿಯ ಡಿ ಎಂ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲದಲಿ ನೂತನ ಕಛೇರಿಯು ಶುಭಾರಂಭಗೊಂಡಿತು. ಈ ಹಿಂದೆ ಸುಳ್ಯ ಪೋಲಿಸ್ ಠಾಣೆಯ ಬಳಿಯ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ ಕಛೇರಿಯು ಕಾರ್ಯಚರಿಸುತ್ತಿದ್ದು,  ಇದೀಗ ತಾಲೂಕು ಕಛೇರಿಯ ಮುಂಭಾಗದ ಕೆವಿಜಿ ವೃತ್ತ ಕ್ಯಾಪಸ್ ಬಳಿಯ ಡಿ...

ಸಾಹಿತಿ ಭೀಮರಾವ್ ವಾಷ್ಠರ್ ಅವರ ಮರಾಠಿ ಕವನಗಳು ಮಡಿಕೇರಿ ದಸರಾ  ಕವಿಗೋಷ್ಠಿಗಳಲ್ಲಿ ವಾಚನ

ಸುಳ್ಯದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಎರಡು ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಅ. 9 ರಂದು ಬೃಹತ್ತಾದ ಭವ್ಯ ಗಾಂಧಿ ಮಂಟಪದ ವೇದಿಕೆಯಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿ ಸಮಾರಂಭದಲ್ಲಿ "ಜಗಾತ್ಲ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಸುಬ್ರಹ್ಮಣ್ಯ ಅ.12: ರೋಟರಿ ಜಿಲ್ಲೆ 3181 ಇದರ ನಾಲ್ಕು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಒಳಗೊಂಡಂತೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಕ್ಟೋಬರ್ 20ರಂದು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿಸುವುದಾಗಿದೆ. ಈ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗಾಗಿ ರೋಟರಿ ಜಿಲ್ಲೆಯ ಅಧಿಕಾರಿಗಳು ಒಳಗೊಂಡಂತೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳ, ಸದಸ್ಯರುಗಳ ವಿಶೇಷ...
Loading posts...

All posts loaded

No more posts

error: Content is protected !!