
ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್(ರಿ) ಶಿವಮೊಗ್ಗ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇದರ ಸಹಯೋಗದೊಂದಿಗೆ ಅಕ್ಟೋಬರ್ 27ರ ರವಿವಾರದಂದು ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 11 ರಿಂದ 13 ವರ್ಷದ ಬಾಲಕಿಯರ ವಿಭಾಗದಲ್ಲಿ ಛಾಯಾ ನಾವೂರು ಇವರು 6ನೇ ಸ್ಥಾನ ಪಡೆದು ಡಿಸೆಂಬರ್ 24 ರಂದು ಥಾಯ್ಲೆಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಆಯ್ಕೆ ಆಗಿರುತ್ತಾರೆ.ಇವರು ಬೆಂಗಳೂರಿನಲ್ಲಿ ದೈಹಿಕ ಶಿಕ್ಷಕರಾಗಿರುವ ಗಣೇಶ ನಾವೂರು ಹಾಗೂ ಸ.ಹಿ.ಪ್ರಾ.ಶಾಲೆ ಪಂಬೆತ್ತಾಡಿಯ ಶಿಕ್ಷಕಿ ಭವ್ಯ .ಬಿ ಇವರ ಪುತ್ರಿ. ಸ.ಹಿ.ಪ್ರಾ.ಶಾಲೆ ಬೊಬ್ಬೆಕೇರಿಯ 6ನೇ ತರಗತಿಯ ವಿದ್ಯಾರ್ಥಿನಿ. ನಿರಂತರ ಯೋಗ ಕೇಂದ್ರ ನಿಂತಿಕಲ್ಲಿನಲ್ಲಿ ಯೋಗ ಶಿಕ್ಷಕ ಶರತ್ ಕುಮಾರ್ ಮರ್ಗಿಲಡ್ಕ ಇವರ ಬಳಿ ಯೋಗ ತರಬೇತಿ ಪಡೆಯುತ್ತಿದ್ದಾರೆ.
