ಸುಳ್ಯದ ಬೈತಡ್ಕದಲ್ಲಿ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಹಾಗೂ ಮತ್ತೋರ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ಯಾಂಕರ್ ನ್ನು ಎರಡು ಕ್ರೇನ್ ಗಳ ಸಹಾಯದಿಂದ ಮೇಲಕ್ಕೆತ್ತಲಾಯಿತು. ಈ ಸಂದರ್ಭದಲ್ಲಿ ಟ್ಯಾಂಕರ್ ನಿಂದ ಡೀಸೆಲ್ ಮತ್ತಷ್ಟು ಸೋರಿಕೆಯಾದಾಗ ಸ್ವಯಂಸೇವಕರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಸರಿಪಡಿಸಲಾಯಿತು. ಬಳಿಕ ಟ್ಯಾಂಕರನ್ನು ರಸ್ತೆ ಬದಿಗೆ ಸರಿಸಿ ನಿಲ್ಲಿಸಲಾಯಿತು. ಈ ವೇಳೆಗೆ ಮಂಗಳೂರು ಎಂ ಆರ್ ಪಿ ಎಲ್ ನಿಂದ ಅಧಿಕಾರಿಗಳ ತಂಡ ಆಗಮಿಸಿ ಟ್ಯಾಂಕ್ ನಲ್ಲಿದ್ದ ಡೀಸೆಲ್ ಅನ್ನು ಮತ್ತೊಂದು ಟ್ಯಾಂಕರ್ ಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಿದ್ದಾರೆ. ಅಂದಾಜು ಸುಮಾರು 12 ಸಾವಿರಕ್ಕೂ ಅಧಿಕ ಡೀಸೆಲ್ ನಷ್ಟವಾಗಿರಬಹುದು. ಮಂಗಳೂರಿನಿಂದ ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪ್ಪೋಗೆ ಡೀಸೆಲ್ ಸಾಗಿಸುತ್ತಿದ್ದು, ಲಾರಿಯ ಹಿಂಬದಿ ಚಕ್ರವು ಸಿಡಿದ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಗಾಯಗೊಂಡವರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ.
ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್ ಸೋರಿಕೆಯ ಪರಿಣಾಮ ಬೈತಡ್ಕ ತಿರುವಿನಲ್ಲಿ ಡೀಸೆಲ್ ರಸ್ತೆಯಲ್ಲಿ ಹರಿದು ಜಾರುತ್ತಿದ್ದು ಇದೀಗ ಪೋಲಿಸ್ ಮತ್ತು ಅಗ್ನಿ ಶಾಮಕ ದಳವು ರಸ್ತೆಗೆ ನೀರನ್ನು ಹಾಕಿ ಶುಚಿ ಗೊಳಿಸುತ್ತಿದ್ದಾರೆ. ಆದರೂ ವಾಹನ ಸವಾರರು ಆದಷ್ಟು ಜಾಗಾರುಕತೆಯಿಂದ ವಾಹನ ಚಲಾವಣೆ ಮಾಡಬೇಕಿದ್ದು ಎಚ್ಚರ ತಪ್ಪಿದರೆ ಅಪಾಯವು ಗ್ಯಾರಂಟಿ.