
ಅಡಿಕೆ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೆರೆ ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಅ.28 ರ ರಾತ್ರಿ ನಡೆದಿದೆ, ಅರಂಬೂರು ರಾಷ್ಟ್ರೀಯ ಹೆದ್ದಾರಿ ಬದಿಯ ಕರ್ನಾಟಕ ಟ್ರೇಡರ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಪಕ್ಕದ ಮನೆಯವರ ಗಮನಕ್ಕೆ ಬಂದು ಅಂಗಡಿ ಮಾಲಕರಿಗೆ ತಿಳಿಸಿದಮೇರೆಗೆ ಸ್ಥಳಕ್ಕೆ ಬಂದ ಅಂಗಡಿ ಮಾಲಕರಿಗೆ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ, ಕೂಡಲೇ ಸ್ಥಳಿಯರ ನೆರವಿನಿಂದ ಪೋಲಿಸರಿಗೆ ಒಪ್ಪಿಸಲಾಗಿದೆ, ಕಳ್ಳ ಪುತ್ತೂರು ಮೂಲದ ಬಶೀರ್ ಎಂದು ತಿಳಿದು ಬಂದಿದೆ.
