ವರ್ಷಿಣಿ ಯೋಗ ಎಜುಕೇಷನ್ ಮತ್ತು ಸಂಸ್ಕೃತಿಕ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಡಿ. ವಿ ಯಸ್. ಕಾಲೇಜು ನ ಲ್ಲಿ ಅ.27 ರಂದುಬನಡೆದ ರಾಷ್ಟ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 6ರಿಂದ 10ರ ವಯೊಮಾನದ ಹುಡುಗಿಯರ ವಿಭಾಗದಲ್ಲಿ ಶೈನಿ ಕೊರಂಬಡ್ಕ ದ್ವಿತೀಯ ಸ್ಥಾನ, 11ರಿಂದ 13ರ ವಯೊಮಾನದ ಹುಡುಗಿಯರ ವಿಭಾಗದಲ್ಲಿ ಜಿಶಾ ಕೊರಂಬಡ್ಕ 3ನೇ ಸ್ಥಾನ ಇವರು ಕೇಶವ ಮತ್ತು ವಿದ್ಯಾ ದಂಪತಿಗಳ ಪುತ್ರಿ ಆಗಿದ್ದು ವಾಲ್ತಾಜೆ ಶಾಲಾ ವಿದ್ಯಾರ್ಥಿ.
ನಿಹಾನಿ ವಾಲ್ತಾಜೆ 4ನೇ ಸ್ಥಾನ ಪಡೆದಿದ್ದು ಇವರು ಪ್ರಶಾಂತ್ ಮತ್ತು ಚೈತ್ರ ವಾಲ್ತಾಜೆ ದಂಪತಿಗಳ ಪುತ್ರಿ ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಶಾಲಾ ವಿದ್ಯಾರ್ಥಿನಿ 11ರಿಂದ 13ರ ವಯೋಮನದಲ್ಲಿ ಮಣಿಪ್ರಕಾಶ್ ಕಡೋಡಿ ದ್ವಿತೀಯ ಸ್ಥಾನ ಪಡೆದಿದ್ದು ಇವರು ಚಂದ್ರಶೇಖರ ಹಾಗೂ ಭಾರತಿ ಕಡೋಡಿ ದಂಪತಿಗಳ ಪುತ್ರ ಸ. ಕಿ. ಪ್ರಾ ಶಾಲೆ ವಾಲ್ತಾಜೆ ವಿದ್ಯಾರ್ಥಿ ಇವರುಗಳು ಡಿಸೆಂಬರ್ 2024ರಲ್ಲಿ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ ಗೆ ಆಯ್ಕೆ ಆಗಿರುತ್ತಾರೆ. ಈ ವಿದ್ಯಾರ್ಥಿಗಳು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರ ದ ವಿದ್ಯಾರ್ಥಿಗಳು ಇವರಿಗೆ ಯೋಗ ಗುರು ಶರತ್ ಮರ್ಗಿಲಡ್ಕ ಯೋಗ ತರಬೇತಿ ನೀಡಿದ್ದಾರೆ.