
ದೊಡ್ಡತೋಟದಿಂದ ಹೈದಂಗೂರು ವರೆಗಿನ ರಸ್ತೆಯನ್ನು ಶೀಘ್ರದಲ್ಲಿ ದುರಸ್ಥಿಗೊಳಿಸಬೇಕೆಂದು ಒತ್ತಾಯಿಸಿ ಬೊಳ್ಳಾಜೆ ಬೂತ್ ಸಮಿತಿ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಂಡಲ ಸಮಿತಿಯ ಮಾಜಿ ಅಧ್ಯಕ್ಷರದ ಹರೀಶ್ ಕಂಜಿಪಿಲಿ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಧನಂಜಯ ಕೋಟೆಮೂಲೆ
ಶಕ್ತಿ ಕೇಂದ್ರ ಪ್ರಮುಕ್ ವೇಣುಗೋಪಾಲ್ ಮಂದ್ರಪ್ಪಾಡಿ, ಪಂಚಾಯತ್ ಸದಸ್ಯರಾದ ವೇಣುಗೋಪಾಲ ತುಂಬೆತಡ್ಕ, ಬೂತ್ ಸಮಿತಿ ಅಧ್ಯಕ್ಷರಾದ ನಿತಿನ್ ಎರ್ಮೆಟ್ಟಿ, ಕಾರ್ಯದರ್ಶಿ ಅಶೋಕ್ ಕಿಲಾರ್ಕಜೆ ಯವರು ಉಪಸ್ಥಿತರಿದ್ದರು.
