
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ,ಜೇಸಿಐ ಸುಳ್ಯ ಪಯಸ್ವಿನಿ (ರಿ )ಸುಳ್ಯ, ಚೈತ್ರ ಯುವತಿ ಮಂಡಲ (ರಿ )ಅಜ್ಜಾವರ, ಪ್ರತಾಪ ಯುವಕ ಮಂಡಲ( ರಿ) ಅಜ್ಜಾವರ, ಆಯುಷ್ ಇಲಾಖೆ ದ.ಕ ಜಿಲ್ಲೆ,ಲಯನ್ಸ್ ಕ್ಲಬ್ ಸುಳ್ಯ
ಇವುಗಳ ಸoಯುಕ್ತ ಆಶ್ರಯದಲ್ಲಿ 9ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ “ಮಾನವನ ಸ್ವಾಸ್ತ್ಯ ರಕ್ಷಣೆ ಹಾಗೂ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು.
ಈ ಸಂದರ್ಭ ದಲ್ಲಿ ಡಾ. ದೀಪ್ತಿ ಎಸ್ ಅವರು ಸಭಿಕರಿಗೆ ಆರೋಗ್ಯ ರಕ್ಷಣೆ ಮತ್ತು ಆಯುರ್ವೇದ ದ ಉಪಯೋಗ ದ ಬಗ್ಗೆ ಮಾಹಿತಿ ನೀಡಿದರು.
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಜೇಸಿಐ ಸುಳ್ಯ ಪಯಸ್ವಿನಿ ಯ ಅಧ್ಯಕ್ಷ ಗುರುಪ್ರಸಾದ್ ನಾಯಕ್ ಪೂರ್ವಾಧ್ಯಕ್ಷ ನವೀನ್ ಕುಮಾರ್, ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ಮತ್ತು ಸದಸ್ಯರು ,ಪ್ರತಾಪ್ ಯುವಕ ಮಂಡಲ ಅಜ್ಜಾವರ ಇದರ ಅಧ್ಯಕ್ಷ ಗುರುರಾಜ್ ಅಜ್ಜಾವರ ಮತ್ತು ಸದಸ್ಯರು, ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು. ಉಪಸ್ಥಿತರಿದ್ದರು.
