ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸುಳ್ಯ ವಲಯ ಸಮಿತಿ ಇದರ ವತಿಯಿಂದ ವಿಜಿಲೆಂಡ್ ವಿಖಾಯ ತರಬೇತಿ ಶಿಬಿರ ವಿಖಾಯ ಚಯರ್ಮೆನ್ ಮಹಮ್ಮದ್ ಕೆ ಎ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು ನಡೆಯಿತು.
ಕಾರ್ಯಕ್ರಮವನ್ನು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಹನೀಫಿ ಉದ್ಘಾಟಿಸಿದರು.
ಪ್ರಥಮ ಸೆಕ್ಷನ್ ಶಿಬಿರವನ್ನು ಅಜ್ಮಲ್ ಪೈಝಿ ಕೋಟ ಮಾತನಾಡಿ ವಿಖಾಯ ಕಾರ್ಯಕರ್ತರ ಸಮಾಜಿಕ ಜವಬ್ದಾರಿ ಬಗ್ಗೆ ತಿಳಿಸಿದರು.
ದ್ವಿತೀಯ ಸೆಕ್ಷನ್ ನಲ್ಲಿ ಸುಳ್ಯ ಅಗ್ನಿಶಾಮಕ ದಳದ ಠಾಣಾಧಿಕಾರಿಗಳಾದ ಸೋಮನಾಥ್ ರವರ ತಂಡ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ಮತ್ತು ಅಗ್ನಿಶಾಮಕ ಕೆಲಸಗಳ ಬಗ್ಗೆ ಡೆಮೋ ತೋರಿಸಿದರು.
ತ್ರಿತೀಯ ಸೆಕ್ಷನ್ ಗಳಲ್ಲಿ ಹಸೈನಾರ್ ಫೈಝಿ ಕೊಡಗು ಮಾತನಾಡಿ ವಿಖಾಯ ಕಾರ್ಯಕರ್ತರಲ್ಲಿ ಇರಬೇಕಾದ ನೆಬಿ ಸುನ್ನತ್ ಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ವಿಖಾಯ ರಾಜ್ಯ ನಾಯಕರಾದ ಇಸ್ಮಾಯಿಲ್ ತಂಙಳ್ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ನಾಯಕರಾದ ಸಿದ್ದೀಕ್ ಅಡ್ಕ , ಜಮಾಲ್ ಕೆ ಎಸ್ , ಅಕ್ಬರ್ ಕರಾವಳಿ . ವಲಯ ನಾಯಕರಾದ ಅಬೂಬಕ್ಕರ್ ಪೂಪಿ, ಕಾದರ್ ಮೊಟ್ಟೆಂಗಾರ್ , ಇಕ್ಬಾಲ್ ಸುಣ್ಣಮೂಲೆ , ಮೊಹಿನುದ್ದೀನ್ ಪೈಝಿ, ಸಿದ್ದೀಕ್ ಬೋವಿಕಾನ , ಆಜ್ವಾವರ ಜಮಾಹತ್ ಅಧ್ಯಕ್ಷರಾದ ಖಾದರ್ ಹಾಜಿ, ಕೊಶಾಧಿಕಾರಿ ಶರೀಫ್ ರಿಲಾಕ್ಸ್ ಅಜ್ಜಾವರ ಕ್ಲಸ್ಟರ್ ನಾಯಕರಾದ ಕಾದರ್ ಮಡಿಕೇರಿ, ರಫೀಕ್ ಹನೀಫಿ, ಪೈಝಲ್ ಮಂಡೆಕೋಲು, ಕಾದರ್ ತುಪ್ಪಕಲ್ಲು, ಅಬೂಬಕ್ಕರ್ ಅಝ್ ಅರಿ ಸೇರಿದಂತೆ ಹಲವಾರು ಕ್ಲಸ್ಟರ್ ಶಾಖಾ ನಾಯಕರು ಭಾಗವಹಿಸಿದರು .
ಶಿಬಿರದಲ್ಲಿ 40 ಸದಸ್ಯರು ಭಾಗವಹಿಸಿ ತರಬೇತಿ ಪಡೆದರು
ಕಾರ್ಯಕ್ರಮನ್ನು ವಿಖಾಯ ಕನ್ವೀನರ್ ಶರೀಫ್ ಸಿ ಎ ಸ್ವಾಗತಿಸಿ ವಂದಿಸಿ ನಿರೂಪಿಸಿದರು