ಗುತ್ತಿಗಾರು ಗ್ರಾಮದ ಪೈಕ ನಿವಾಸಿ ರಾಘವೇಂದ್ರ(ಕುಮಾರ) ಎಂಬವರ ತಲೆಯಲ್ಲಿ ಗೆಡ್ಡೆ ಬೆಳೆದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ಶಸ್ತ್ರ ಚಿಕಿತ್ಸೆಗೆ ಅಂದಾಜು 3 ರಿಂದ 5 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಅದಲ್ಲದೆ ಇವರಿಗೆ ಸುಮಾರು ಕೆಲ ವರ್ಷದ ಹಿಂದೆ ಅಪಘಾತವಾಗಿ ಒಂದು ಕೈ ಸ್ವಾಧೀನ ಕಳೆದು ಕೊಂಡಿದ್ದರು. ಆದರೂ ಒಂದು ಕೈಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಇವರ ಪತ್ನಿಯ ದುಡಿಮೆಯಿಂದ ಬದುಕುವಂತಾಗಿದೆ. ಇವರ ಅತ್ತೆ ಕೂಡ ಇವರ ಮನೆಯಲ್ಲಿದ್ದು ನಡೆಯಲಾರದ ಸ್ಥಿತಿಯಲ್ಲಿದ್ದಾರೆ. ಇವರಿಗೆ ಒಬ್ಬಳು ಪುಟ್ಟ ಮಗಳಿದ್ದು ಜೀವನ ನಿರ್ವಹಣೆಯ ಜತೆಗೆ ಆನಾರೋಗ್ಯದ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ 10 ದಿನ ಕಳೆದರೂ ನಿರ್ಲಕ್ಷ್ಯ ಮಾಡಿದ್ದಾರೆಂದೂ ಅವರ ಮನೆಯವರು ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಯುಷ್ಮಾನ್ ಕಾರ್ಡ್ ಇದ್ದರೂ ಹೆಚ್ಚುವರಿ ವೆಚ್ಚ ಭರಿಸಲು ಇದೀಗ ಸಹೃದಯಿಗಳ ಸಹಾಯ ಬೇಕೆಂದು ಅಂಗಲಾಚುವಂತಾಗಿದೆ. ಈ ಬಾರಿಯ ದೀಪಾವಳಿಗೆ ಖರ್ಚು ಕಡಿಮೆ ಮಾಡಿಯಾದರೂ ತಾವು ನೀಡುವ ಕಿಂಚಿತ್ತು ಕಾಣಿಕೆ ಬಡ ಕುಟುಂಬದ ಬಾಳಲ್ಲಿ ಬೆಳಕು ಕಾಣುವಂತಾಗಲಿ ಎಂಬುದೇ ನಮ್ಮ ಆಶಯ. ಸಹಾಯ ಮಾಡಲಿಚ್ಚಿಸುವವರು ಇವರ ಫೋನ್ ಪೇ ಖಾತೆಗೆ Raghvendra 90194 70365 ಸಂದಾಯ ಮಾಡಬಹುದು.
- Sunday
- November 24th, 2024