ಸುಳ್ಯ : ಬೆಳಕಿನ ಹಬ್ಬ ದೀಪಾವಳಿಗೆ ಕೆಲ ದಿನಗಳು ಬಾಕಿ ಇರುವಾಗ ಪಟಾಕಿ ಸಾಗಾಟಗಳು ಹೆಚ್ಚಾಗಿ ನಡೆಯುತ್ತಿದ್ದು, ಸುಳ್ಯ ತಾಲೂಕಿನ ನಾನಾ ಭಾಗಗಳಲ್ಲಿ ಪೋಲಿಸ್ ಮತ್ತು ಇತರ ಇಲಾಖೆಗಳ ಪರವಾಣಿಗೆ ಪಡೆದುಕೊಂಡು ಪಟಾಕಿ ಮಳಿಗೆ ಆರಂಭಗೊಳ್ಳುತ್ತಿದೆ. ಅಕ್ರಮವಾಗಿ ಪಟಾಕಿ ಸಾಗಾಟ ನಡೆಸುವುದರ ವಿರುದ್ದ ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಸುಳ್ಯದ ಗಾಂಧಿನಗರದಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದು ಪೋಲಿಸ್ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ಉನ್ನತ ಮೂಲಗಳ ಪ್ರಕಾರ ತಿಳಿದು ಬಂದಿದೆ. ಈ ಲಾರಿಯಲ್ಲಿ ಪರವಾನಿಗೆ ಪಡೆಯದೆ ಪಟಾಕಿ ಸಾಗಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು ಇಂತವರ ವಿರುದ್ದ ಕ್ರಮ ಕೈ ಗೊಳ್ಳಬೇಕು ಎಂದು ಅಧಿಕೃತ ಮಾರಾಟಗಾರರು ಆಗ್ರಹಿಸಿದ್ದಾರೆ.
- Sunday
- November 24th, 2024