Ad Widget

ಹರಿಹರ ಪಳ್ಳತ್ತಡ್ಕ : ಅಗಲಿದ ಗ್ರಾಮ ಪಂಚಾಯತ್ ಸದಸ್ಯ ದಿವಾಕರ ಮುಂಡಾಜೆ ರವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸುಳ್ಯ ವಲಯ ಸಮಿತಿಯ ಅಧ್ಯಕ್ಷರಾಗಿ, ಉದ್ಯಮ-ವ್ಯವಹಾರದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ಸಕ್ರಿಯರಾಗಿ, ಹರಿಹರ ಪಳ್ಳತ್ತಡ್ಕ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಹಾಲಿ ಸದಸ್ಯರಾಗಿ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿ, ನೇತಾಜಿ ಯುವಕ ಮಂಡಲ ಹರಿಹರ ಪಳ್ಳತ್ತಡ್ಕ ಇದರ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿ ಜನರು ಪ್ರೀತಿಯಿಂದ “ಮಾಸ್ತರ್” ಎಂದು ಕರೆಯುತ್ತಿದ್ದ ದಿವಾಕರ ಮುಂಡಾಜೆ ರವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅ.24 ರಂದು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಹಾಗೂ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದಲ್ಲಿ ದಿವಾಕರ ಮುಂಡಾಜೆ ರವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮವು ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.
ವೇದಿಕೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ದಿವಾಕರ ಮುಂಡಾಜೆ ರವರ ತಂದೆ ಲಿಂಗಪ್ಪ ಗೌಡ ಮುಂಡಾಜೆ, ತಾಯಿ ಶ್ರೀಮತಿ ಭಾಗೀರಥಿ, ಮಾವ ಲಿಂಗಪ್ಪ ಗೌಡ ಕಡೆಂಬ್ಯಾಲು ಕೊಯಿಲ ಉಪಸ್ಥಿತರಿದ್ದರು.
ಚಂದ್ರಹಾಸ ಶಿವಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಾಕೆ ಮಾಧವ ಗೌಡ, ಡಾ| ಚಂದ್ರಶೇಖರ ಕಿರಿಭಾಗ, ಡಾ| ಗೋವಿಂದ.ಎನ್.ಎಸ್, ರಾಮಚಂದ್ರ ಪಳಂಗಾಯ,ಲೋಕೇಶ್.ಬಿ.ಎನ್, ಹಿಮ್ಮತ್.ಕೆ.ಸಿ ಹಾಗೂ ವೆಂಕಟ್ ವಳಲಂಬೆ ನುಡಿನಮನ ಸಲ್ಲಿಸಿದರು.
ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading