Ad Widget

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸುಬ್ರಮಣ್ಯ ವಲಯದ ವತಿಯಿಂದ ಡಾ| ಡಿ.ವೀರೇಂದ್ರ ಹೆಗ್ಗಡೆ ಭೇಟಿ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಿ ಸುಬ್ರಮಣ್ಯ ವಲಯ ಇದರ ವತಿಯಿಂದ ಇಂದು ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ರವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇದರ ವತಿಯಿಂದ ಹರಿಹರದಲ್ಲಿ ನಡೆದ ಪ್ರತಿಭಟನ ಸಭೆಯ ಮನವಿಯನ್ನು ಪೂಜ್ಯ ರಿಗೆ ನೀಡಿ ಅವರ ಜೊತೆ ಕಸ್ತೂರಿ ರಂಗನ್ ವರದಿ ಜಾರಿ ಆಗದಂತೆ ಸರಕಾರಗಳಿಗೆ ಮನವಿ ನೀಡುವಂತೆ ವಿನಂತಿಸಲಾಯಿತು.
ಮನವಿ ಸ್ವೀಕರಿಸಿದ ಅವರು ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮದು ಸಂಪೂರ್ಣ ವಿರೋಧವಿದೆ ಹೋರಾಟ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಷ್ಟೆ ಯೋಜನೆಯ ಸದಸ್ಯರು ಈ ವರದಿ ಜಾರಿ ವಿರೋಧಿಸುವ ಹೋರಾಟಗಳಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ಸರಕಾರ ಮಟ್ಟದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರ ದೊರಕುವಂತಾಗಲಿ ಎಂದರು. ಅಲ್ಲದೆ ಕೇಂದ್ರ ಸರಕಾರಕ್ಕೆ ಈ ಯೋಜನೆ ಜಾರಿ ಆಗದಂತೆ ನನ್ನದಾದ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಮಣ್ಯ ವಲಯ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಸುಳ್ಯ ತಾಲ್ಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್, ಬಾಳುಗೋಡು ಒಕ್ಕೂಟ ಅಧ್ಯಕ್ಷ ನಾಗೇಶ್ ತಳೂರು, ಹರಿಹರ ಒಕ್ಕೂಟ ಅಧ್ಯಕ್ಷರು ಹರ್ಷ ಪಾಲ್ತಾಡು, ಕೊಲ್ಲಮೊಗರು ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ದೋಲನಮನೆ, ಕಲ್ಮಕಾರ್ ಒಕ್ಕೂಟ ಅಧ್ಯಕ್ಷರಾದ ಶೇಷಪ್ಪ ಗೌಡ ಕೊಪ್ಪಡ್ಕ. ಹಾಗೂ ಕೊಲ್ಲಮೊಗರು ಒಕ್ಕೂಟ ಸದಸ್ಯರಾದ ಹರೀಶ್ ಬಳ್ಳಡ್ಕ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading