ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್(ರಿ.) ಸುಳ್ಯ ಹಾಗೂ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್(ರಿ.) ಸುಳ್ಯ ಇವುಗಳ ಸಂಯುಕ್ತಾಶ್ರಯದಲ್ಲಿ ಗುತ್ತಿಗಾರಿನ ದೀನ್ ದಯಾಳ್ ಸಭಾಭವನದಲ್ಲಿ ಅ.20 ರಂದು “ಬಾಲಗೋಕುಲ ಪ್ರಶಿಕ್ಷಣ ವರ್ಗ” ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇದರ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ರವರು ದೀಪ ಬೆಳಗಿಸಿ ಭಾರತಮಾತೆ ಮತ್ತು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಿಭಾಗ ಸಹಕಾರ್ಯವಾಹ ಸುಭಾಷ್ ಚಂದ್ರ ಕಳಂಜ ಪ್ರಸ್ತಾವನೆ ಮಾಡಿದರು. ಸುಳ್ಯ ತಾಲೂಕು ಸಂಘ ಸಂಚಾಲಕ್ ಚಂದ್ರಶೇಖರ ತಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಳ್ಯ ತಾಲೂಕಿನ 14 ಮಂಡಲದ 33 ಗ್ರಾಮಗಳಿಂದ 152 ಶಿಕ್ಷಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮೊದಲಿಗೆ ಶಿಕ್ಷಾರ್ಥಿಗಳಿಗೆ 5 ಗುಂಪುಗಳಲ್ಲಿ ಆಟಗಳು, ಅಭಿನಯಗೀತೆ ಅಭ್ಯಾಸ ಮಾಡಿಸಲಾಯಿತು. ನಂತರದ ಅವಧಿಯಲ್ಲಿ ಸಾಮೂಹಿಕ ಅಭ್ಯಾಸ, ಎಚ್ಚರಿಕೆಗಳು, ಮಕ್ಕಳನ್ನು ತೊಡಗಿಸಿಕೊಳ್ಳುವ ಬಗ್ಗೆ ಕಣ್ಣೂರು ವಿಭಾಗದ ಕುಟುಂಬ ಪ್ರಬೋಧನ್ ಪ್ರಮುಖರಾದ ಪುಂಡರೀಕಾಕ್ಷರು ನಡೆಸಿಕೊಟ್ಟರು. ನಂತರ ಬಾಲಗೋಕುಲದ ಪ್ರಾತ್ಯಕ್ಷಿಕೆಯನ್ನು 20 ನಿಮಿಷಗಳಲ್ಲಿ 4 ಗುಂಪುಗಳಲ್ಲಿ ಮಾಡಿ ನಂತರ ಅದೇ ಗುಂಪುಗಳಲ್ಲಿ ಯೋಜನೆಯನ್ನು ಮಾಡಲಾಯಿತು. ಹಾಗೂ ಮಂಗಳೂರು ವಿಭಾಗದ ಬಾಲಗೋಕುಲ ಟೋಳಿ ಸದಸ್ಯರಾದ ಕೊಡ್ಮಾಣ್ ಮೋನಿಷಾ ರವರು ಸಾಮೂಹಿಕ ಗೋಕುಲ ಗೀತೆಯನ್ನು ಅಭಿನಯದ ಮೂಲಕ ಹಾಡಿಸಿದರು.
- Friday
- November 1st, 2024