ವರಮಹಾಲಕ್ಷ್ಮಿ ಆಚರಣಾ ಸಮಿತಿಯ 2023-24ನೇ ಸಾಲಿನ ಲೆಕ್ಕಪತ್ರ ಮಂಡನೆ ಹಾಗೂ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಅ.19 ರಂದು ಸಮಿತಿಯ ಅಧ್ಯಕ್ಷರಾದ ವಾಣಿ ಯಶವಂತ ಉಳುವಾರು ಇವರ ಉಪಸ್ಥಿತಿಯಲ್ಲಿ ನಡೆಯಿತು. 2023-24ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಾಚಾರವನ್ನು ಖಜಾಂಜಿಯಾದ ಗೀತಾ ಜಯಪ್ರಕಾಶ್ ಉಳುವಾರು ರವರು ಮಂಡಿಸಿದರು. ಎಲ್ಲರೂ ಸರ್ವಾನುಮತದಿಂದ ಅನುಮೋದಿಸಿದರು. ನಂತರ 2023-24ನೇ ಸಾಲಿನ ನೂತನ ವರಮಹಾಲಕ್ಷ್ಮಿ ಆಚರಣಾ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಾರ್ವತಿ ಪುಂಡರಿಕ ಕಲ್ಲುಗದ್ದೆ, ಉಪಾಧ್ಯಕ್ಷರಾಗಿ ಶ್ರೀಮತಿ ರೀನಾ ಶೇಖರ್ ಚೋಡಿಪಣೆ, ಕಾರ್ಯದರ್ಶಿಯಾಗಿ ಶ್ರೀಮತಿ ಭವಿತಾ ಕುಸುಮಾಧರ ಅಡ್ಕಬಳೆ, ಖಜಾಂಜಿಯಾಗಿ ಶ್ರೀಮತಿ ರತ್ನಾವತಿ ಹರಿಶ್ಚಂದ್ರ ಅಳಿಕೆ ಇವರುಗಳನ್ನು ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಸೋಮಶೇಖರ್ ಪೈಕ, ಅರಂತೋಡು ಪ್ರಾ.ಕೃ.ಪ.ಸ ಸಂಘದ ನಿರ್ದೇಶಕರುಗಳಾದ ವಿನೋದ್ ಕುಮಾರ್ ಉಳುವಾರು, ಕುಸುಮಾಧರ ಅಡ್ಕಬಳೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಧ್ಯಕ್ಷರಾದ ಕೆ.ಆರ್ ಪದ್ಮನಾಭ ಕುರುಂಜಿ ಇವರುಗಳು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.
ಗೀತಾ ಜಯಪ್ರಕಾಶ್ ಸ್ವಾಗತಿಸಿ, ಭವಿತಾ ಕುಸುಮಾಧರ ಅಡ್ಕಬಳೆ ಧನ್ಯವಾದ ಸಮರ್ಪಿಸಿದರು.