ಇದು ಸಂಸ್ಕೃತಿಗಳ ತವರು ಜಿಲ್ಲೆ , ನೈತಿಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಆಚರಣೆ – ಜುಬಿನ್ ಮಹಪಾತ್ರ
ಶಾರದೆಯ ಮೆರವಣಿಗೆ ಹಿಂದುಗಳಾದ ನಾವು ತೀರ್ಮಾನಿಸಬೇಕು ಸರಕಾರವಲ್ಲ – ಕಟೀಲ್
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ನಡೆಯುತ್ತಿರುವ 53 ನೇ ಶ್ರೀ ಶಾರದದೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮರೋಪ ಸಮಾರಂಭ ಮೂಲಕ ತೆರೆಯೆಳೆಯಲಾಯಿತು .
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಂಡು ನಿರಂತರವಾಗಿ 9 ದಿನಗಳ ಕಾಲ ವೈದಿಕ ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ದಸರಾವನ್ನು ಆಚರಣೆ ನಡೆದು ಅ.16 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಾರಾಯಣ ಕೇಕಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡುತ್ತಾ ತುಳುನಾಡಿನ ಅಡಿಪಾಯವೇ ಸುಳ್ಯ ಆಗಿದೆ ಎಲ್ಲರು ಒಟ್ಟಿಗೆ ಸೇರಿದರೆ ಶಕ್ತಿಯ ಪ್ರದರ್ಶನವಾಗುತ್ತದೆ. ಅದೇ ಮಾದರಿಯಲ್ಲಿ ಈ ಭಾರಿಯ ದಸರಾ ಒಗ್ಗಟ್ಟಿನ ಮೂಲಕ ಸಂಘಟಿಸಿ ಜನಸ್ತೋಮವನ್ನು ಸೇರಿಸಲು ಸಫಲವಾಗಿದೆ ಮುಂದಿನ ದಿನಗಳಲ್ಲಿ ಮೈಸೂರು , ಮಡಿಕೇರಿ , ಮಂಗಳೂರು ಮಾದರಿಯಲ್ಲಿ ಸುಳ್ಯ ದಸರವು ಇನ್ನಷ್ಟು ಹೆಸರು ವಾಸಿಯಾಗಲಿ ಎಂದರು. ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ಮಾತನಾಡುತ್ತಾ ಅತೀ ಹೆಚ್ಚಿನ ಸಂಸ್ಕೃತಿಗಳ ತವರು ದಕ್ಷಿಣ ಕನ್ನಡ ಜಿಲ್ಲೆಯಾಗಿದೆ. ಇಲ್ಲಿ ಸಂಪ್ರಾದಾಯಗಳು ಕೂಡ ಅಡಕವಾಗಿ ವಿವಿಧ ಆಚರಣೆಯ ಮೂಲಕ ನಡೆದು ಬರುತ್ತಿದೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜತೆಗೆ ಆಚರಣೆಗಳ ನೈತಿಕ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಆಚರಿಸಿಕೊಂಡು ಬರಬೇಕು ಎಂದು ಹೇಳಿದರು.
ಮಾಜಿ ಸಂಸದರಾದ ನಳೀನ್ ಕುಮಾರ್ ಕಟೀಲ್ ಮಾತನಾಡುತ್ತಾ ಕಾಲ ಕಾಲಕ್ಕೆ ಯಾವೆಲ್ಲ ಬದಲಾವಣೆ ಆಗಬೇಕು ಅವುಗಳನ್ನು ದೇವರು ಮಾಡುತ್ತಾರೆ. ನಾವು ನಮ್ಮ ಕೆಲಸಗಳನ್ನು ಮಾಡಬೇಕು ಪ್ರತಿಫಲ ದೇವರು ನೀಡುತ್ತಾರೆ.
ಶಾರದೆಯ ಮೆರವಣಿಗೆ ಹೇಗೆ ಮಾಡಬೇಕು ಎಂದು ಹಿಂದು ಸಮಾಜ ತೀರ್ಮಾನ ಮಾಡಬೇಕೇ ಹೊರತು ಯಾವುದೇ ಸರಕಾರಗಳು ಮಾಡಬಾರದು ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ , ಆರ್ ಕೆ ನಾಯರ್ ಸನ್ಮಾನ ಸ್ವೀಕರಿಸಿ ಶುಭ ಹಾರೈಸಿದರು. ಸಭಾ ವೇದಿಕೆಯಲ್ಲಿ ಕೆ ಗೋಕುಲ್ ದಾಸ್ , ಕೃಷ್ಣ ಕಾಮತ್ ಅರಂಬೂರು , ಡಾ.ಲೀಲಾಧರ ಡಿ ವಿ , ಸಂತೋಷ್ ಕುತ್ತಮೊಟ್ಟೆ , ಬೂಡು ರಾಧಾಕೃಷ್ಣ ರೈ , ರಾಜು ಪಂಡಿತ್ , ನವೀನ್ ಚಂದ್ರ ಕೆ ಎಸ್ , ಎಂ ಕೆ ಸತೀಶ್ , ಸುನಿಲ್ ಕೇರ್ಪಳ, ಗಣೇಶ್ ಆಳ್ವ , ಅಶೋಕ್ ಪ್ರಭು ಉಪಸ್ಥಿತರಿದ್ದರು. ಡಾ. ಲೀಲಾಧರ ಡಿ ವಿ ಪ್ರಾಸ್ತವಿಸಿ, ಅಶೋಕ್ ಪ್ರಭು ಸ್ವಾಗತಿಸಿ, ಗಣೇಶ್ ಆಳ್ವ ವಂದಿಸಿದರು. ಅಚ್ಚುತ್ತ ಮುಳ್ಯ ಅಟ್ಲೂರು ಹಾಗೂ ಸುಶ್ಮಿತ ಕಡಪಳ ಕಾರ್ಯಕ್ರಮ ನಿರೂಪಿಸಿದರು.