ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹ್ಯೊಗೆ ಬಝಾರ್‌ನ ಆವರಣದಲ್ಲಿರುವ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಅಧೀನದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಾಯೋಜಿತ ಯೋಜನೆಯಾದ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ ದಲ್ಲಿ ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಉಚಿತವಾಗಿ ಕೌಸಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ತರಬೇತಿಯಲ್ಲಿ ಅಕ್ವೇರಿಯಂ ಜೋಡಣೆ, ನಿರ್ವಹಣೆ, ಅಲಂಕಾರಿಕಾ ಮೀನುಗಳ ಸಾಕಣೆ, ಮರಿ ಉತ್ಪಾದನೆ, ಉದ್ಯಮಶೀಲತೆ, ಮಾರಾಟ, ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುವುದು.
ಒಂದು ತರಬೇತಿಯಲ್ಲಿ ಒಟ್ಟು ೩೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಿರುದ್ಯೋಗಿ ಪದವಿದರರು, ಕಾಲೇಜು ವ್ಯಾಸಂಗವನ್ನು ಮೊಟಕುಗೊಳಿಸಿರುವ ಯುವಕ-ಯುವತಿಯರಲ್ಲಿ ಸ್ವಉದ್ಯೋಗಾಂಕ್ಷಿಗಳು, ಸ್ವಯಿಚ್ಛೆಯಿಂದ ವ್ಯಾಪಾರ ಮಾಡಬಯಸುವ ಕರ್ನಾಟಕ ಕರಾವಳಿಯ ನಿವಾಸಿಗಳಿಂದ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕಾಲೇಜಿನ ವೆಬ್‌ಸೈಟ್: https://www.cofm.edu.in ಯಿಂದ ಡೌನ್‌ಲೋಡ್ ಮಾಡಿ ಇಮೇಲ್: sdfstc2023@gmail.com ಗೆ ಕಳುಹಿಸಲು ಕೋರಲಾಗಿದೆ. ಅರ್ಜಿಯನ್ನು ಅಕ್ಟೋಬರ್ ೩೦, ೨೦೨೪ ರೊಳಗೆ ಕಳುಹಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ತರಬೇತಿಯ ಸಂಯೋಜಕರು ಹಾಗೂ ಯೋಜನೆಯ ಪ್ರಧಾನ ಸಂಶೋಧಕರುಗಳ ಮೊಬೈಲ್ ಸಂಖ್ಯೆ: ೯೯೧೬೯ ೨೪೦೮೪ ಅಥವಾ ೮೬೧೮೬ ೬೦೯೪೯ ಗೆ ಸಂಪರ್ಕಿಸಬಹುದಾಗಿದೆ.
- Sunday
- November 24th, 2024