Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ವಿಶೇಷ ಮಕ್ಕಳ ಶಾಲೆಗೆ ಕೊಡುಗೆ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಮರ್ದಾಳದ ಬೆಥನಿ ವಿಶೇಷ ಮಕ್ಕಳ ಶಾಲೆಗೆ ಮಕ್ಕಳ ವಿದ್ಯಾಭ್ಯಾಸದ ಅಭಿವೃದ್ಧಿಗಾಗಿ ಧನಸಹಾಯವನ್ನು ಮಾಡಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರವರ ಈ ದಿನ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಹಾಗೂ ಭೋಜನ ವ್ಯವಸ್ಥೆಯನ್ನು ಕೂಡ ಮಾಡಲಾಯಿತು. ಸರಳವಾಗಿ ನಡೆದ ಸಮಾರಂಭದ ಬೆಥನಿ ವಿಶೇಷ ಮಕ್ಕಳ ಶಾಲೆಯ ಸಂಚಾಲಕ ಜಕಾರಿಯ ಮಾತನಾಡಿ ರೋಟರಿ ಅಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳ ಕಾರ್ಯವನ್ನು ಕೊಂಡಾಡಿದರು. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿರುವ ವಿಶೇಷ ಮಕ್ಕಳ ಶಾಲೆಗೆ ಪ್ರೋತ್ಸಾಹ ನೀಡುವುದನ್ನ ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕಿ ಶೈಲ, ರೋಟರಿ ಜಿಲ್ಲೆ ವಲಯ 5ರ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ,ಪೂರ್ವ ಅಸಿಸ್ಟೆಂಟ್ ಗವರ್ನರ್ ರಾಮಕೃಷ್ಣ ಮಲ್ಲಾರ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು .ಪೂರ್ವಾಧ್ಯಕ್ಷರುಗಳಾದ ಗಿರಿಧರ ಸ್ಕಂದ, ಮೈಲಪ್ಪ ಸಂಕೇಶ, ಕಾರ್ಯದರ್ಶಿ ಚಿದಾನಂದ ಕುಳ ಕೋಶಾಧಿಕಾರಿ ಜಯಪ್ರಕಾಶ್, ಕಡಬ ರೋಟರಿ ಮಾಜಿ ಜೋನಲ್ ಲಿಪ್ಟಿನೆಂಟ್ ಸುಜಿತ್ ಪಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 80ರಷ್ಟು ವಿಶೇಷ ಮಕ್ಕಳು ಕಲಿತಿರುವ ಸಂಸ್ಥೆಯಲ್ಲಿ 22 ಶಿಕ್ಷಕರು ಸೇವೆಯನ್ನು ಸಲ್ಲಿಸುವುದರಲ್ಲಿ ಕಾರ್ಯ ಮಗ್ನರಾಗಿದ್ದರು . ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅವರು ಸಂಸ್ಥೆಗೆ ಉತ್ತಮ ತಳಿಯ ತೆಂಗಿನ ಗಿಡವನ್ನು ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading