
ಸ್ನೇಹ ಸಂಗಮ ಗಾಯನೋತ್ಸವ – 2024 ಹಾಸನದಲ್ಲಿ ಸೆ.29 ರಂದು ನಡೆದ ಕರೋಕೆ ಗಾಯನೋತ್ಸವ ಕಾರ್ಯಕ್ರಮದಲ್ಲಿ ವಿಜಯ್‌ಕುಮಾರ್ ಸುಳ್ಯ ಇವರು ಭಾಗವಹಿಸಿದ್ದು ಇವರ ಬಹುಮುಖ ಪ್ರತಿಭೆಯನ್ನು ವೇದಿಕೆಯಲ್ಲಿ ಗುರುತಿಸಿ, ಜಿಲ್ಲಾಮಟ್ಟದ “ಕಲಾಶ್ರೀ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು. ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕರಾಗಿದ್ದು ಪ್ರಸ್ತುತ ಟಿಎಪಿಸಿಎಂಎಸ್ .ಲಿ. ಸುಳ್ಯ ಇಲ್ಲಿ ಉದ್ಯೋಗಿಯಾಗಿದ್ದಾರೆ.
