
ಸುಳ್ಯ: ಸುಳ್ಯದ ಆರ್ತಾಜೆ ಬಳಿಯಲ್ಲಿ ಬೈಕ್ ಗಳ ನಡೆದ ಅಪಘಾತದಲ್ಲಿ ಮೃತಪಟ್ಟವರು ಐವರ್ನಾಡು ಸೊಸೈಟಿಯಲ್ಲಿ ಲೆಕ್ಕಿಗರಾಗಿ ಕೆಲಸ ನಿರ್ವಹಿಸುತ್ತಿದ್ದ ಭೋಜಪ್ಪ ಗೌಡ ಪಾಲೆಪ್ಪಾಡಿ ಎಂದು ಗುರುತಿಸಲಾಗಿದೆ. ಬೈಕ್ ಗಳ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆನ್ನೆಲಾಗಿದೆ. ಬುಲ್ಲೆಟ್ ನಲ್ಲಿ ತೆರಳುತ್ತಿದ್ದ ಅರುಣ ಎಲಿಮಲೆ ಹಾಗೂ ವಸಂತ ಸೇವಾಜೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತಪಟ್ಟ ಬೋಜಪ್ಪ ಗೌಡರು ಪತ್ನಿ , ಇಬ್ಬರು ಪುತ್ರರು ಹಾಗೂ ಓರ್ವ ಸಹೋದರಿ , ಮೂವರು ಸಹೋದರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
