ಕೊಡಿಯಾಲ ಗ್ರಾಮದ ಅಜಿರಂಗಳ (ದಿಂಬ್ರಿಗುತ್ತು) ದಿ. ಚಿಕ್ಕಪ್ಪ ರೈಗಳ ಧರ್ಮಪತ್ನಿ ಸುಶೀಲ ರೈ(೭೮) ರವರು ಅ.13 ರಂದು ಸಂಜೆ ಸುಮಾರು ೭ ಗಂಟೆಗೆ ನಿಧನ ಹೊಂದಿದ್ದಾರೆ. ಇಂದು ಪೂ. 11 ಗಂಟೆಗೆ ಮೃತರ ವಿಧಿವಿಧಾನ ಕಾರ್ಯವು ಅಜಿರಂಗಳ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ಪುತ್ರ ದಿವಾಕರ ರೈ, ಸೊಸೆ ಕಸ್ತೂರಿ, ಮಗಳು ಹೇಮಲತಾ, ಅಳಿಯ ಮೋಹನ್ ದಾಸ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.