ಐನೆಕಿದು ಗ್ರಾಮದ ನಿವಾಸಿ, ನಿವೃತ್ತ ಯೋಧ ಕೃಷ್ಣಪ್ರಸಾದ ಕೂಜುಗೋಡು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆ ಯಲ್ಲಿ ಅ.13 ರಂದು ರಂದು ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸವಿತಾ, ಪುತ್ರಿಯರಾದ ಸಾದ್ವಿ, ಸಾಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಇವರು ಭಾರತೀಯ ಸೇನೆಯಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮೃತರ ಪ್ರಾರ್ಥಿವ ಶರೀರವು ಇಂದು ಮಧ್ಯಾಹ್ನ 12.00 ಗಂಟೆ ಗೆ ಮನೆ ತಲುಪಲಿದೆ. ತದನಂತರ ಸುಮಾರು 1.30 ಗಂಟೆಗೆ 25 ಮಂದಿ ಮಿಲಿಟರಿ ಯವರು ಆಗಮಿಸಿ ಪೆರೇಡ್ ಮಾಡಿ ಅಂತಿಮ ಗೌರವ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.