ಕಳೆದ ಕೆಲವು ವರ್ಷಗಳಿಂದ ಅವಿನಾಶ್ ಬಸ್ ನಲ್ಲಿ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕುಂಚಡ್ಕದ ಗುರು ಪ್ರಸಾದ್ ಮೃತಪಟ್ಟ ದುರ್ದೈವಿ. ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅಡ್ಯಡ್ಕ ತಲುಪುವ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಸುಳ್ಯಕ್ಕೆ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ತಂದೆ ನಾರಾಯಣ ಬೆಳ್ಚಪ್ಪಾಡ, ತಾಯಿ ಸುಶೀಲ, ಪತ್ನಿ ಮೀನಾ, ಪುತ್ರ ಮಿಗುನ್, ಸಹೋದರರಾದ ರೋಹಿತಾಕ್ಷ, ದಿವಾಕರ ಹಾಗೂ ಬಂಧುಗಳನ್ನು ಅಗಲಿದ್ದಾರೆ.