ಸುಬ್ರಹ್ಮಣ್ಯ ಅ.13: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಮಹತ್ವಕಾಂಕ್ಷಿ ಯೋಜನೆ ಯಾದ ನೂತನ ಸಮುದಾಯ ಭವನದ ನಿರ್ಮಾಣ ಕಾರ್ಯ ಪ್ರಗತಿಯ ಹಂತದಲ್ಲಿರುತ್ತದೆ. ತಾಲೂಕಿನ 42 ಗ್ರಾಮಗಳ ಸಜಾತಿಬಾಂಧವರ ಮನೆಗಳನ್ನು ಭೇಟಿ ಮಾಡುವ ಅಂಗವಾಗಿ ಸುಬ್ರಹ್ಮಣ್ಯ ಗ್ರಾಮದಲ್ಲಿ ಒಕ್ಕಲಿಗ ಗೌಡ ಸಮುದಾಯದ ಸುಮಾರು 300 ಮನೆಗಳನ್ನು ಶನಿವಾರ ಭೇಟಿ ಮಾಡಲಾಯಿತು. ಹಾಗೂ ನೂತನ ಸಮುದಾಯ ಭವನದ ಮಾಹಿತಿಯನ್ನು ನೀಡುವುದರೊಂದಿಗೆ ಧನ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಅಭಿಯಾನದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ ಬೈಲು, ತಾಲೂಕು ಪದಾಧಿಕಾರಿಗಳು ,ವಲಯ ಸಮಿತಿ ಪದಾಧಿಕಾರಿಗಳು, ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರುಗಳು ತಾಲೂಕು ಮಹಿಳಾ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮ ಮಹಿಳಾ ಸಮಿತಿ ಪದಾಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಬೆಳಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನವನ್ನು ಸ್ಥಾಪಕ ಸದಸ್ಯ ಡಾ. ಶಿವಕುಮಾರ ಹೊಸಳ್ಳಿಕೆ ಅವರು ತಮ್ಮ ಮನೆಯಲ್ಲಿ ನೀಡಿರುವರು.
- Tuesday
- December 3rd, 2024