Ad Widget

ಗುತ್ತಿಗಾರು : ಸಾಮಾಜಿಕ ಅರಣ್ಯೀಕರಣ ಮತ್ತು ಹಣ್ಣು ಹಂಪಲು ಗಿಡಗಳ ನೆಡುವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಶೌಯ೯ ವಿಪತ್ತು ನಿರ್ವಹಣಾ ಘಟಕ ಗುತ್ತಿಗಾರು ಹಾಗೂ ಅರಣ್ಯ ಇಲಾಖೆಯವರ ಜೊತೆಗೂಡಿ ಸಾಮಾಜಿಕ ಅರಣೀಕರಣದ ಕಾರ್ಯಕ್ರಮದಲ್ಲಿ 250 ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮವನ್ನು ಶ್ರೀ ಕೃಷ್ಣಾ ಭಜನಾ ಮಂದಿರದ ವಠಾರ ಮತ್ತು ಪಿ. ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ತೋಟದ ಸುತ್ತಮುತ್ತಲ್ಲಿ ನಡೆಸಲಾಯಿತು.
ಶ್ರೀ ಕೃಷ್ಣಾ ಭಜನಾ ಮಂದಿರದ ಅಧ್ಯಕ್ಷರಾದ  ಬಿ.ವಿ. ರವಿಪ್ರಕಾಶ್ ರವರು ಹಣ್ಣಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ.ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಹಣ್ಣು ಹಂಪಲು ಗಿಡ ನೆಡುವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ರಮೇಶ್ ರವರು ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ತಾಲೂಕಿನಲ್ಲಿ ಎಲ್ಲಾ ವಿಪತ್ತು ಘಟಕದ ಸದಸ್ಯರ ಭಾಗವಹಿಸುವಿಕೆಯಿಂದ ಬೇರೆ ಬೇರೆ ಕಾರ್ಯಕ್ಷೇತ್ರ ದಲ್ಲಿ 250 ರಿಂದ 500 ಗಿಡಗಳವರೆಗೆ ಹಣ್ಣು ಹಂಪಲು ಗಿಡಗಳು ಮತ್ತು ಬೆಲೆ ಬಾಳುವ ಗಿಡಗಳನ್ನು ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನ, ಶಾಲೆಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದರ ಮೂಲಕ ಖಾವಂದರ ಆಶಯದಂತೆ ಸುಮಾರು 10 ಲಕ್ಷ ಗಿಡ ನಾಟಿಯನ್ನು ರಾಜ್ಯದಾದ್ಯಂತ ಈ ವರ್ಷ ಮಾಡಲಾಗುವುದು ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರಾದ ಅಜಿತ್ ಬಾಕಿಲ ರವರು ಗಿಡ ನೆಟ್ಟು ಅದನ್ನು ಮುಂದೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿರುತ್ತದೆ. ಹಾಗೂ ಎಲ್ಲರ ಸಹಕಾರದೊಂದಿಗೆ ಇಂತಹ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು
ಈ ಸಂದರ್ಭದಲ್ಲಿ ವಿಪತ್ತು ಘಟಕದ ಪ್ರತಿನಿಧಿ ಜಯರಾಮ ಪೈಕ ಹಾಗೂ ಭಜನಾ ಮಂದಿರದ ಸದಸ್ಯರಾದ ನಾರಾಯಣ ಕುಚ್ಚಾಲ ಮತ್ತು ಸುಖೇಶ ಚಾರ್ಮತ ಹಾಗೂ ಸಂಘದ ಎಲ್ಲಾ ಸದಸ್ಯರು ವಿಪತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.
ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯವರಾದ ಲೋಕೇಶ್ವರ ಡಿ.ಆರ್ ರವರು ಎಲ್ಲರನ್ನು ಸ್ವಾಗತಿಸಿ ಧನ್ಯವಾದವಿತ್ತರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!