ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಾರು ಚಾಲಕ ಶೇಷಪ್ಪ ಗೌಡ ಚಿಕಿತ್ಸೆ ಫಲಿಸದೆ ಅ.12 ರಂದು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಳ್ಯ, ಅರಂತೋಡು ಭಾಗದಲ್ಲಿ ಅಂಬಾಸಿಡರ್ ಕಾರು ಚಾಲಕರಾಗಿ ಚಿರಪರಿಚಿತರಾಗಿದ್ದರು. ಪಾಲ್ತಾಡಿನ
ಶೇಷಪ್ಪ ಗೌಡ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ಮರಳಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಲ್ಲಿ ಅವರಿಂದು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.