ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ನವಂಬರ್ 3ರಂದು ಗೂನಡ್ಕ ಸಜ್ಜನ ಸಬಾಭವನದಲ್ಲಿ ನಡೆಯಲಿದ್ದು ಅದರ ಸ್ಥಳೀಯ ಸ್ವಾಗತ ಸಮಿತಿ ರಚನಾ ಸಭೆ ಅಕ್ಟೋಬರ್ 7ರಂದು ಗೂನಡ್ಕ ಸುನ್ನಿ ಸೆಂಟರ್ ನಲ್ಲಿ ಜರಗಿತು. ಗೂನಡ್ಕ ಜುಮಾ ಮಸ್ಜಿದ್ ಆಡಳಿತ ಸಮಿತಿ ಪದಾಧಿಕಾರಿಗಳು, ಗೂನಡ್ಕ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ಯುನಿಟ್ ಪದಾಧಿಕಾರಿಗಳು, ಅಲ್ ಅಮೀನ್ ಅಸೋಸಿಯೇಷನ್ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಗೂನಡ್ಕ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯನ್ನು ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು. ಲತೀಫ್ ಸಖಾಫಿ ಗೂನಡ್ಕ, ಜಲೀಲ್ ಸಖಾಫಿ ದೇವರಕೊಲ್ಲಿ ಶುಭ ನುಡಿಗಳನ್ನಾಡಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಬಾಹ್ ಸಖಾಫಿ ಅಲ್ ಹಿಮಮಿ ಮುನ್ನುಡಿ ಮಾತುಗಳನ್ನಾಡಿದರು. ಸುಳ್ಯ ಡಿವಿಷನ್ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ ಸಾಹಿತ್ಯೋತ್ಸವ ಸಮಿತಿ ಜನರಲ್ ಕನ್ವೀನರ್ ನಿಯಾಝ್ ಎಲಿಮಲೆ ವಂದಿಸಿದರು.ಡಿವಿಷನ್ ಸಾಹಿತ್ಯೋತ್ಸವ ಸ್ವಾಗತ ಸಮಿತಿ ಸಲಹಾ ಸಮಿತಿ ಸದಸ್ಯರಾಗಿ ಅಬೂಬಕರ್ ಸಖಾಫಿ ಗೂನಡ್ಕ, ಮುಹಮ್ಮದ್ ಕುಂಞಿ ಗೂನಡ್ಕ, ಉಮರ್ ಬೀಜದಕಟ್ಟೆ, ಉಮರ್ ಹಾಜಿ ಪಿ.ಎ, ಅಬ್ದುಲ್ಲ ಎಸ್.ಎಂ, ಹಂಝ ಕೊಯನಾಡು, ಉಮರ್ ಪುತ್ರಿ ಹಾಗೂ ಫೈಝಲ್ ಝುಹ್ರಿ ಕಲ್ಲುಗುಂಡಿ(ಚೇರ್ಮಾನ್), ಜಾಬಿರ್ ಗೂನಡ್ಕ (ಜನರಲ್ ಕನ್ವೀನರ್) ಅಶ್ರಫ್ ಏ.ಟಿ (ಫಿನಾನ್ಸ್ ಕಂಟ್ರೋಲರ್), ಲತೀಫ್ ಸಖಾಫಿ ಗೂನಡ್ಕ, ಸಿದ್ದೀಖ್ ಗೂನಡ್ಕ (ವೈಸ್ ಚೇರ್ಮಾನ್) ಹಾರಿಸ್ ಗೂನಡ್ಕ, ಆಶಿಖ್ ಕಲ್ಲುಗುಂಡಿ (ಕನ್ವೀನರ್ಸ್) ಹನೀಫ್ ಝೈನಿ (ಫುಡ್ ಇನ್ಚಾರ್ಚ್) ಉನೈಸ್ ಗೂನಡ್ಕ, ಹಸೈನ್ ಕಲ್ಲುಗುಂಡಿ (ಡೆಕೊರೇಶನ್ ಇನ್ಚಾರ್ಚ್), ಸ್ವಾದಿಖ್ ಮಾಸ್ಟರ್, ಇಸ್ಹಾಖ್ ಗೂನಡ್ಕ, ನಾಸರ್ ಗೂನಡ್ಕ, ಇಬ್ರಾಹೀಂ ಗೂನಡ್ಕ, ಅಝೀಝ್ ಗೂನಡ್ಕ, ರುನೈಝ್ ಕೊಯನಾಡು,ಸ್ವಾದಿಕ್ ಕುಂಬಕ್ಕೊಡ್, ಮುನೀರ್ ಪ್ರಗತಿ, ಸವಾದ್ ಜಿ.ಎಂ.ಕೆ, ಅಬುಸಾಲಿ ಪಿ.ಕೆ, ಹಸೈನ್ ಎ.ಟಿ, ಅಝೀಝ್ ಟಿ.ಬಿ ಮಿರ್ಶಾದ್ ಚೆರೂರ್,ನೌಶಾದ್ ಕೂಲ್ ಸದಸ್ಯರಾಗಿ ಆಯ್ಕೆಯಾದರು.
- Friday
- November 1st, 2024