ಯುವಕನೋರ್ವ ಮಲಗಿದಲ್ಲೇ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಬಾಳುಗೋಡಿನ ಕಿರಿಭಾಗದಲ್ಲಿ ಅ.06 ರಂದು ವರದಿಯಾಗಿದೆ.
ಕಿರಿಭಾಗದ ದಿ. ಸೀತಾರಾಮ ಗೌಡ ಎಂಬವರ ಪುತ್ರ ಪವಿತ್ ಕಿರಿಭಾಗ (35) ಮೃತಪಟ್ಟ ಯುವಕ.
ಪವಿತ್ ಹಾಗೂ ಅವರ ತಾಯಿ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಅವರ ತಾಯಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರಿಂದ ಪವಿತ್ ಒಬ್ಬರೇ ಮನೆಯಲ್ಲಿದ್ದರು. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಪವಿತ್ ಕುಡಿದು ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಪುತ್ತೂರಿನ ಜ್ಯೋತಿ ಇಲೆಕ್ಟ್ರಿಕಲ್ ನಲ್ಲಿ ಹಾಗೂ ನಂತರ ಗುತ್ತಿಗಾರು ಮೆಸ್ಕಾಂ ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡಿದ್ದರು. ಕುಡಿತದ ಚಟದಿಂದ ಇಲ್ಲಿಯೂ ಕೆಲಸ ಕಳೆದುಕೊಂಡಿದ್ದರು.