Ad Widget

ತಾಲುಕು ಮಟ್ಟದ ಕ್ರೀಡಾಕೂಟದಲ್ಲಿ ರೋಟರಿ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡಕ್ಕೆ ಸಮಗ್ರ ಪ್ರಶಸ್ತಿ ಒಟ್ಟು 17 ಪದಕ ಗಳಿಸಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ನ.05 ರಂದು ಕೆ ಎಸ್ ಗೌಡ ಪ .ಪೂ ಕಾಲೇಜು ನಿಂತಿಕಲ್ಲು ಇಲ್ಲಿ ನಡೆದ ಸುಳ್ಯ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ, ಒಟ್ಟು 17 ಪದಕಗಳನ್ನು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ವತಿಯಿಂದ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಸಂಸ್ಥೆಯ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಶಿ ಎ ಎಸ್ – ಸುತ್ತಿಗೆ ಎಸೆಯುವಿಕೆ ಪ್ರಥಮ, ಗುಂಡು ಎಸೆತ ಪ್ರಥಮ , ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿರುತ್ತಾರೆ. ದ್ವಿತೀಯ ಪಿಯುಸಿ ವಿಜ್ಞಾನದ ವಿದ್ಯಾರ್ಥಿನಿ ಇಂಚರ ಪಿ ಆರ್ – ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಅನನ್ಯ ಕೆ ಬಿ – ಎತ್ತರ ಜಿಗಿತ ಪ್ರಥಮ , 100 ಮೀಟರ್ ಓಟ ತೃತೀಯ , ಪೂಜಶ್ರೀ ಡಿ ಪಿ – 1500 ಮೀಟರ ಓಟ ತೃತೀಯ, ಪ್ರಥಮ ಪಿಯುಸಿಯ ವಿಜ್ಞಾನದ ಪೂರ್ಣಶ್ರೀ ಎ ಎಸ್ – ಜಾವೆಲಿನ ಎಸೆತ ತೃತೀಯ , ಉದ್ದ ಜಿಗಿತ ತೃತೀಯ, ನಂದನ ಕೆ ಎಲ್ – ಚಕ್ರ ಎಸೆತ ತೃತೀಯ,ಪ್ರಥಮ ಪಿಯುಸಿಯ ವಾಣಿಜ್ಯ ವಿದ್ಯಾರ್ಥಿನಿ ಹಸ್ತಾ ಕೆ ಎಂ- 200 ಮೀಟರ ಓಟ ಪ್ರಥಮ,100 ಮೀಟರ ಓಟ ದ್ವಿತೀಯ ವರ್ಷಿತಾ ಜಿ – ಟ್ರಿಪಲ್ ಜಂಪ್ ದ್ವಿತೀಯ, ಕಿಶನ್ ಬಿ ಎಂ – ವೇಗದ ನಡಿಗೆ ತೃತೀಯ ಸ್ಥಾನ ಹಾಗೂ ಸಂಸ್ಥೆಯ ಬಾಲಕಿಯರ ತಂಡ 4×100 ಮೀಟರ್ ರಿಲೇಯಲ್ಲಿ ಹಾಗೂ 4×400 ಮೀಟರ್ ರಿಲೇ ಯಲ್ಲಿ ವ್ರಥಮ ಸ್ಥಾನ ಪಡೆದಿರುತ್ತಾರೆ. ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರು ,ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು, ಪ್ರಾಂಶುಪಾಲರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿವಂದಿಸಿರುತ್ತಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!