ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯರಾದ ದಿ.ರಾಮಚಂದ್ರ ಪ್ರಭು, ನೆಲ್ಲೂರು ಕೆಮ್ರಾಜೆ ಎಲಿಮಲೆ ಇವರ ಆಕಸ್ಮಿಕ ಮರಣ ಪರಿಹಾರ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿಯವರು ಅ. ೦5 ರಂದು ದಿ.ರಾಮಚಂದ್ರ ಪ್ರಭು ಅವರ ಪತ್ನಿ ಶ್ರೀಮತಿ ಉಮಾವತಿಯವರಿಗೆ ಕ್ಯಾಂಪ್ಕೊ ಸುಳ್ಯ ಶಾಖೆಯಲ್ಲಿ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಕ್ಯಾಂಪ್ಕೋ ಶಾಖೆಯ ಪ್ರಬಂಧಕರಾದ ವಿನೋದ್ ಕುಮಾರ್ ಎ, ಸಂತೋಷ್ ಪಿ, ಸೀನಿಯರ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳಾದ ವಿಷ್ಣುಪ್ರಸಾದ್, ಪ್ರವೀಣ್ ಹಾಗು ತೇಜಸ್ ಎ ಆರ್ ಉಪಸ್ಥಿತರಿದ್ದರು.
- Tuesday
- December 3rd, 2024