ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರು, ಮೈಸೂರು ವಿಭಾಗ ಉಪನಿರ್ದೇಶಕರ ಕಛೇರಿ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ವಲಯ ಮತ್ತು ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳು ಕಾರ್ಕಳ ಇದರ ಸಹಯೋಗದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯು ಅ. 3 , 4 ರಂದು ಕಾರ್ಕಳದಲ್ಲಿ ನಡೆಯಿತು.14 ವರ್ಷದ ವಯೋಮಾನದ ಬಾಲಕಿಯರ ವಿಭಾಗದ ಅಥ್ಲೆಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಅವನಿ ಎಂ.ಎಸ್ ಪ್ರಥಮ ಸ್ಥಾನ ಈಕೆ ಶಶಿಧರ ಎಂ.ಜೆ ಮತ್ತು ರೇಷ್ಮಾ ದಂಪತಿಗಳ ಪುತ್ರಿ,14 ವರ್ಷದ ವಯೋಮಾನದ ಬಾಲಕರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ತನುಷ್ ಮೋಂಟಡ್ಕ ತೃತೀಯ ಸ್ಥಾನ ಈತ ಹರೀಶ್ ಮತ್ತು ಭವಾನಿ ದಂಪತಿಗಳ ಪುತ್ರ,14 ವರ್ಷ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ ದ್ವಿತೀಯ ಸ್ಥಾನ ಈಕೆ ಶರತ್ ಅಡ್ಕಾರ್ ಮತ್ತು ಶೋಭಾ ದಂಪತಿಗಳ ಪುತ್ರಿ, ಹಾರ್ದಿಕ ಕೆರೆಕ್ಕೋಡಿ ಚತುರ್ಥ ಸ್ಥಾನ ಈಕೆ ಕೃಷ್ಣಪ್ಪ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ, 17 ವರ್ಷ ವಯೋಮಾನದ ಬಾಲಕರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ತನುಷ್ ಕೆ.ಆರ್ ದ್ವಿತೀಯ ಸ್ಥಾನ ಈತ ರವಿ ನಾವೂರು ಮತ್ತು ಪ್ರಜ್ಞಾ ದಂಪತಿಗಳ ಪುತ್ರ, 17 ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಶ್ರೀಮ ಕೆ.ಹೆಚ್ ಈಕೆ ಕುಶಾಲಪ್ಪ ಮತ್ತು ಸುಜಾತ ದಂಪತಿಗಳ ಪುತ್ರಿ. ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಮಾರ್ಗದರ್ಶನ ನೀಡಿರುತ್ತಾರೆ.
- Monday
- November 25th, 2024