Ad Widget

ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್  ವತಿಯಿಂದ ಪಾಂಡಿಗದ್ದೆ ಶಾಲೆಯಲ್ಲಿ ಸೋಲಾರ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ

ಕೆವಿಜಿ ಪಾಲಿಟೆಕ್ನಿಕ್ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನೆ ಯ ಹಿರಿಯ ವಿದ್ಯಾರ್ಥಿಗಳ ಸಂಘ ದಶಮಾನೋತ್ಸವ ಸಂಭ್ರಮದಲ್ಲಿರುವ ಸಮಾಜ ಸೇವಾ ಸಂಘಟನೆ ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ (ರಿ) ಸುಳ್ಯ ಸಾರತ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೆವಿಜಿ ಪಾಲಿಟೆಕ್ನಿಕ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಂಡಿಗದ್ದೆ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ಸೋಲಾರ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ಅಕ್ಟೋಬರ್ ೦೨ರಂದು ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

. . . . . .

ಸೋಲಾರ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದ ಎಸ್. ಡಿ. ಎಮ್ ಕಾನೂನು ಮಹಾವಿದ್ಯಾಲಯ ಮಂಗಳೂರು ಇದರ ಸಹಾಯಕ ಪ್ರಾಧ್ಯಾಪಕರು, ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಶ್ರೀ ಪುಷ್ಪರಾಜ ಕೆ ಇವರು ಕರ್ನಾಟಕ ರಾಜ್ಯ ದಲ್ಲಿಯೇ ಇಂತಹ ಮಾದರಿ ಸಂಘಟನೆ ಇನ್ನೊಂದಿಲ್ಲ, ಸಮಾಜ ಕಾರ್ಯದಲ್ಲಿ ತೊಡಗಿಕೊಂಡಿರುವ ಎನ್ ಎಸ್ ಎಸ್ ಹಿರಿಯ ವಿದ್ಯಾರ್ಥಿಗಳು ಕಟ್ಟಿಕೊಂಡಿರುವ ಸಂಘದ ವಿಶಿಷ್ಟವಾದ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಬೇಕಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಬೊಳ್ಳೂರು ಇವರು ಸೇವಾ ಸಂಗಮ ಟ್ರಸ್ಟ್ ನ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು ವೇದಿಕೆಯಲ್ಲಿ ಕೆವಿಜಿ ಪಾಲಿಟೆಕ್ನಿಕ್ ಸುಳ್ಯ ಇದರ ಪ್ರಾಂಶುಪಾಲರಾದ ಶ್ರೀ ಶ್ರೀಧರ ಕೆ, ಸ್ತ್ರೀರೋಗ ತಜ್ಞರಾದ ಡಾ‌. ವೀಣಾ ಪಾಲಚಂದ್ರ, ಉಪನ್ಯಾಸಕರಾದ ಡಾ. ಅನುರಾಧ ಕುರುಂಜಿ, ಕಾರ್ಯಕ್ರಮದಡಿ ಕಾರಿ ಗಳಾದ ಶ್ರೀ ಚಂದ್ರಶೇಖರ ಬಿಳಿನೆಲೆ, ಶ್ರೀ ವಾಚಣ್ಣ ಕೆರೆಮೂಲೆ, ಶ್ರೀ ಜಯರಾಮಗೌಡ ಕಂಬಳ, ಶ್ರೀಮತಿ ಸಂಧ್ಯಾ ಕುಮಾರಿ ಬಿ ಎಸ್, ಶ್ರೀ ಜಯಂತ ಕೆ,
ಕೆವಿಜಿ ಡೆಂಟಲ್ ಕಾಲೇಜಿನ ಡಾ. ಟೆರ್ರಿ, ಶ್ರೀ ಜಯಂತ ತಳ್ಳೂರು, ಶ್ರೀ ರಕ್ಷಿತ್ ಬೊಳ್ಳೂರು ಉಪಸ್ಥಿತರಿದ್ದರು.

ಸ್ಮಾರ್ಟ್ ಕ್ಲಾಸ್ ನ ದಾನಿಗಳಾದ ಟ್ರಸ್ಟ್ ನ ಉಪಾಧ್ಯಕ್ಷರಾದ ವಿಜೇತ ಬೊಳ್ಳೂರು ಮತ್ತು ಕಾರ್ತಿಕ್ ಕಂಬಳ ದಂಪತಿಗಳ ಪರವಾಗಿ ಶ್ರೀ ಜಯರಾಮ ಗೌಡ ಕಂಬಳ ಇವರನ್ನು ಗೌರವಿಸಲಾಯಿತು. ಪಾಂಡಿಗದ್ದೆ ಶಾಲಾ ವತಿಯಿಂದ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಬೊಳ್ಳೂರು ಇವರನ್ನು ಗೌರವಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ಪುಟಾಣಿ ಕುರ್ಚಿಗಳನ್ನು ಅಧ್ಯಕ್ಷರಾದ ಡಾ. ವೀಣಾ ಪಾಲಚಂದ್ರ ಇವರು ಶಾಲಾ ಪುಟಾಣಿಗಳಿಗೆ ಹಸ್ತಾಂತರಿಸಿದರು.

ಡಾ‌. ವೀಣಾ ಪಾಲಚಂದ್ರ ಇವರಿಂದ ವೈದ್ಯಕೀಯ ತಪಾಸಣಾ ಶಿಬಿರ, ಕೆವಿಜಿ ಡೆಂಟಲ್ ಮಹಾವಿದ್ಯಾಲಯದ ವೈದ್ಯರಿಂದ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಶಾಲಾ ಪುಟಾಣಿಗಳಿಗೆ ಮತ್ತು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಿತು ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಶ್ರೀ ಎನ್ ಆರ್ ಗಣೇಶ್ ವಹಿಸಿದ್ದರು, ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಜಯಪ್ರಕಾಶ್ ಕೆ, ಶ್ರೀ ಬಾಲಕೃಷ್ಣ ಗೌಡ ಬೊಳ್ಳೂರು, ನಿವೃತ್ತ ಅಧಿಕ್ಷಕರಾದ ಶ್ರೀ ರಾಮಚಂದ್ರಗೌಡ ಪಲ್ಲತಡ್ಕ, ನಿವೃತ್ತ ಉಪನ್ಯಾಸಕರಾದ ಶ್ರೀ ಸತ್ಯನಾರಾಯಣ ಪ್ರಸಾದ್, ಶ್ರೀ ಪಾಲಚಂದ್ರ ವೈವಿ, ಕೆ ವಿ ಜಿ ಪಾಲಿಟೆಕ್ನಿಕ್ ನ ಉಪ ಪ್ರಾಂಶುಪಾಲರಾದ ಶ್ರೀ ಅಣ್ಣಯ್ಯ ಕೆ, ಶ್ರೀ ಚಂದ್ರಶೇಖರ್ ಬಿಳಿನೆಲೆ, ಡಾ. ಅನುರಾಧ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರವಿಕುಮಾರ್ ಚಳ್ಳಕ್ಕೋಡಿ, ಅಧೀಕ್ಷಕರಾದ ಶ್ರೀ ಶಿವರಾಮ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಸಂಗಮ ಟ್ರಸ್ಟನ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಎಸ್ ಡಿ ಎಮ್ ಸಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಶ್ರೀ ಯಶೋಧರ, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವ ಕಿರಣ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಾದ ಅಚಿಂತ್ಯ ಮತ್ತು ಯಾನ್ವಿ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಸುಜಿತ್ ಮಾನ್ಯಡ್ಕ ಧನ್ಯವಾದ ಸಲ್ಲಿಸಿದರು. ಸಹ ಶಿಕ್ಷಕರಾದ ಅಶೋಕ್ ಕುಮಾರ್, ವಿಂದ್ಯಾ, ಶಶಿಕಲಾ ಸಹಕಸಿದರು, ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

ಸೇವಾ ಸಂಗಮ ಟ್ರಸ್ಟ್ 5ಕ್ಕೂ ಹೆಚ್ಚು ಹಳ್ಳಿ ಪ್ರದೇಶದ ಅಂಗನವಾಡಿ ಮತ್ತು ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದೆ‌. ಇದೇ ಮೊದಲ ಬಾರಿಗೆ ಪಾಂಡಿಗದ್ದೆ ಶಾಲೆಗೆ ಸೋಲಾರ್ ಚಾಲಿತ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದೆ ಮತ್ತು ಉದ್ಘಾಟನೆಯ ಸಮಯದಿಂದಲೇ ಕಾರ್ಯಗತವಾಗುವಂತೆ ಎಲ್ಲಾ ಪರಿಕರಗಳನ್ನು ಟ್ರಸ್ಟ್ ನ ಸದಸ್ಯರ ತಂಡದ ತಂತ್ರಜ್ಞರೇ ವ್ಯವಸ್ಥೆ ಮಾಡಿರುವುದು ವಿಶೇಷತೆಯಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!