ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗೌರವಾನ್ವಿತ ಬೃಹತ್ ಕೈಗಾರಿಕೆ ಉಕ್ಕು ಹಾಗೂ ಗಣಿ ಸಚಿವರಾದ ಹೆಚ್. ಡಿ . ಕುಮಾರಸ್ವಾಮಿಯವರನ್ನು ಅಸಹನೀಯ ಪದ ಬಳಕೆ ಬಳಸಿ ಅಗೌರವಿಸಿರುವುದನ್ನು ಸುಳ್ಯ ತಾಲೂಕು ಜನತದಳವು ಖಂಡಿಸುತ್ತದೆ. ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ದುರುದ್ದೇಶದಿಂದ ಕೇಂದ್ರ ಸಚಿವರನ್ನು ಅವಮಾನಗೊಳಿಸಿರುವ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ್ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಸುಳ್ಯ ತಾಲೂಕು ಜನತಾದಳವು ಸುಳ್ಯ ತಾಲೂಕು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು. ಈ ವೇಳೆ ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ , ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಉಪಾಧ್ಯಕ್ಷರುಗಳಾದ ದೇವರಾಮ ಬಾಳಕಜೆ, ರೋಹನ್ ಪೀಟರ್, ಪ.ಜಾತಿ ಪ.ಪಂಗಡ ಅಧ್ಯಕ್ಷ ಎಂ.ಬಿ. ಚೋಮ, ರಾಮಚಂದ್ರ ಬಳ್ಳಡ್ಕ ಮೊದಲಾದವರು ಉಪಸ್ಥಿತರಿದ್ದರು.
- Tuesday
- December 3rd, 2024