Ad Widget

ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬ – ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಅವಕಾಶ

ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾ‌ರ್ ಆರ್ಕೆಡ್‌ನಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ಈ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ ಅ.3 ರಂದು ನಡೆಯಿತು.

. . . . . .

ಮುಖ್ಯ ಅತಿಥಿಗಳಾಗಿ ಶೀತಲ್ ಯು.ಕೆ.ಪ್ರಭಾರ ಶಿಕ್ಷಣಾಧಿಕಾರಿಗಳು ಸುಳ್ಯ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷೆ, ಶಿಕ್ಷಕಿ ಧನಲಕ್ಷ್ಮಿ ಕುದ್ಪಾಜೆ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿರು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶುಭಕರ ಬಿ.ಸಿ.ಉಪಸ್ಥಿತರಿದ್ದರು.

ಶಾಲೆಯ ಪುಟಾಣಿ ಮಕ್ಕಳು ಶಾರದಾದೇವಿ, ಲಕ್ಷ್ಮಿ, ಸರಸ್ವತಿ ವೇಷಧರಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಹಾಗೂ ರಾಮಾಯಣದ ಒಂದು ತುಣುಕಾದ ಸೀತಾ ಪಾರಾಯಣದ ಕಥೆಯನ್ನು ನಾಟಕ ರೂಪದಲ್ಲಿ ಮಾಡಲಾಯಿತು.

ಪ್ರತಿ ವರ್ಷವೂ ಅಂಜಲಿ
ಮೊಂಟೆಸ್ಸರಿ ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಮೂರು ದಿನಗಳ ಕಾಲ ಇದನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.
ಹಾಗೂ ನವರಾತ್ರಿ ಸಂದರ್ಭ ಪ್ಲೇ ಗ್ರೂಪ್ ಹಾಗೂ ಪ್ರಿ ಕೆಜಿ ಮಕ್ಕಳನ್ನು ಶಾಲೆಗೆ ದಾಖಲಿಸುವ ಅವಕಾಶವನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತಿದೆ ಎಂದು  ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ. ತಿಳಿಸಿದ್ದಾರೆ.

ಪ್ರಮೀಳ ಹಾಗೂ ಸವಿತಾ ಪ್ರಾರ್ಥಿಸಿ, ಶ್ರೀಮತಿ ಶಿಲ್ಪ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶ್ರುತಿ ಸ್ವಾಗತಿಸಿ, ಶ್ರೀಮತಿ ನೇತ್ರ ಧನ್ಯವಾದ ಗೈದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!