
ಸುಳ್ಯ : ಸುಳ್ಯ ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಇದನ್ನು ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿ ನ್ಯಾಯಲಯದಲ್ಲಿ ದಂಡ ಕಟ್ಟುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು. ಸುಳ್ಯದ ರಾಮ ಭಜನಾ ಮಂದಿರದ ಮುಂಭಾಗದಲ್ಲಿ ಕೆಲ ವಾಹನ ಸವಾರರು ಪಾರ್ಕಿಂಗ್ ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು, ಸರತಿ ಸಾಲಿನಲ್ಲಿ ಮೂರು ಕಾರುಗಳು ನಿಲ್ಲಿಸಲ್ಪಟ್ಟಿದ್ದು ಪೋಲಿಸ್ ಜೀವು ಸಾಗುತ್ತಿದ್ದಂತೆ ಕಾರಿನ ಚಾಲಕರು ತಮ್ಮ ವಾಹನವನ್ನು ಮುಂದಕ್ಕೆ ಕೊಡೊಯ್ದರು. ಪೋಲಿಸ್ ಇಲಾಖೆಯು ಇಷ್ಟೆಲ್ಲ ಕ್ರಮಗಳನ್ನು ಜರುಗಿಸುತ್ತಿದ್ದರೂ ವಾಹನ ಚಾಲಕ ಮಾಲಕರು ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಬದಲಾವಣೆಯಾಗುವ ಲಕ್ಷಣ ಕಾಣುತ್ತಿಲ್ಲ!
