ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 02/10/2024ರಂದು ಮಹಾತ್ಮ ಗಾಂಧೀಜಿಯವರ 155ನೇ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 120ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು .
ಸಭಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಸರ್ವಧರ್ಮಿಯ ಪ್ರಾರ್ಥನೆ, ದೇಶಭಕ್ತಿ ಗೀತೆ ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಪಾರೆಪ್ಪಾಡಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಮಹೇಶ್ ಕೆ.ಕೆ. ಇವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜೀವನ ಕ್ರಮ , ಸಾಧನೆಗಳು, ತತ್ವ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸಿದರು. ಶ್ರೀಮತಿ ಮೋಕ್ಷ ರ ವರು ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಬದುಕು, ಲಾಲ್ ಬಹುದ್ದೂರ್ ಶಾಸ್ತ್ರಿಯವರ ಪ್ರಮುಖ ಘೋಷಣೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು. ಶ್ರೀಮತಿ ಸುಮನ ವಂದನೆಗಳನ್ನು ಸಲ್ಲಿಸಿದರು. ಅಡುಗೆ ಸಿಬ್ಬಂದಿಗಳು ದಿನದ ಕಾರ್ಯಕ್ರಮದ ಸಲುವಾಗಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದ ಕೊನೆಗೆ ಪೋಷಕ ರು ಶ್ರಮದಾನದ ಮೂಲಕ ಶಾಲಾ ಆವರಣ ಸುಚಿತ್ವಗೊಳಿಸಿದರು. ತಾಯಂದಿರು ತಮ್ಮ ಮಕ್ಕಳ ಜೊತೆಗೂಡಿ ಪೌಷ್ಟಿಕ ಆಹಾರದ ಹಣ್ಣಿನ ಗಿಡ ನೆಟ್ಟರು.
- Friday
- November 1st, 2024