ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಒಂದು ದಿನದ ಅಧ್ಯಯನ ಪ್ರವಾಸ ನಡೆಯಿತು. ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿ ಶಿಕ್ಷಕಿಯರು ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿನ ಪಾರಂಪರಿಕ ವಸ್ತು ಸಂಗ್ರಹಾಲಯ ಸೇರಿದಂತೆ ರಾಜರ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಪರೂಪದ ನಾಣ್ಯಗಳು, ದೇಶ,ವಿದೇಶದ ಹಲವು ಬಗೆಯ ಕರೆನ್ಸಿ ನೋಟುಗಳು, ಹಳೆಯ ಹಾಗೂ ದೇಶ ವಿದೇಶದ ದಿನಪತ್ರಿಕೆಗಳ ವಿವಿಧ ಸಂಗ್ರಹಗಳನ್ನು ವೀಕ್ಷಿಸಿದರು. ಮ್ಯೂಸಿಯಂನ ಮಹಮ್ಮದ್ ಯಾಸಿರ್ ತನ್ನ ಸಂಗ್ರಹದ ಬಗ್ಗೆ ವಿವರಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉಪನ್ಯಾಸಕ ಯೋಗೀಶ್ ತಳೂರು, ಶಿಕ್ಷಕಿ ಗೀತಾ ಬಾಲಚಂದ್ರ ಉಪಸ್ಥಿತರಿದ್ದರು.
- Monday
- November 25th, 2024