ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿ ಮೇರಿಹಿಲ್‍ನಲ್ಲಿ ದಿನಾಂಕ: 02-10-2024ರಂದು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರು ಜಂಟಿಯಾಗಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ “ಗಾಂಧೀಜಿಯವರು ಹಾಕಿ ಕೊಟ್ಟ ತ್ಯಾಗ, ಅಹಿಂಸೆ ಮತ್ತು ತತ್ವದ ಹಾದಿಯಲ್ಲಿ ನಡೆದು, ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯ ಇದೆ. ಪ್ರತಿಯೊಬ್ಬರಲ್ಲಿಯೂ ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ ಆದರ್ಶಗಳು ಇದ್ದರೂ ಯಾರು ಅದನ್ನು ಪರಿಣಾಮಕಾರಿಯಾಗಿ ಪಾಲಿಸುತ್ತಿಲ್ಲ. ಈ ಸುಪ್ತವಾಗಿರುವ ಪ್ರಜ್ಞೆಗಳನ್ನು ಬಡಿದೆಬ್ಬಿಸಬೇಕಾದ ಅಗತ್ಯ ಇದೆ. ಆಗ ಮಾತ್ರ ಸುಭೀಕ್ಷ ಹಾಗೂ ಆರೋಗ್ಯ ಪೂರ್ಣ ಭವ್ಯ ಭಾರತದ ನಿರ್ಮಾಣ ಸಾಧ್ಯ ಮತ್ತು ಗಾಂಧೀಜಿಯವರು ಕನಸು ಕಂಡ ರಾಮ ರಾಜ್ಯ ನಿರ್ಮಾಣ ಸಾಧ್ಯವಿದೆ” ಎಂದು ನುಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಕಚೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ ಮತ್ತು ಲಯನ್ಸ್ ಕ್ಲಬ್ ಉಪಾಧ್ಯಕ್ಷೆ ಲಯನ್ ಹೇಮಾ ರಾವ್, ಲಿಯೋ ಅಧ್ಯಕ್ಷೆ ಲಿಯೋ ಆಲಿಶಾ ಸಿಕ್ವೇರಾ, ಲಯನ್ಸ್ ಕ್ಲಬ್‍ನ ಸದಸ್ಯರಾದ ಲಯನ್ ರೊನಾಲ್ಡ್ ಮಸ್ಕರೇನ್ಹಸ್, ಲಯನ್ ನ್ಯಾನ್ಸಿ ಮಸ್ಕರೇನ್ಹಸ್ ಮತ್ತು ಲಿಯೋಕ್ಲಬ್‍ನ ಕಾರ್ಯದರ್ಶಿ ಲಿಯೋ ರಿಯಾನ್ ರೊಡ್ರಿಗಸ್, ಲಿಯೋ ಕ್ಲಬ್‍ನ ಸದಸ್ಯರಾದ ಲಿಯೋ ಅಲೆಸಾಂಡ್ರಾ ಕ್ರಿಸ್ಟನ್ ಹೆರ್ರಿ, ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸಂಜಯ್ ಶೆಣೈ, ಜ್ಞಾನೇಶ್, ದಿವಾಕರ, ಮರಿಯಾ ಡಿಸೋಜ, ಸುಲೋಚನಾ, ಜಯಂತಿ ಮತ್ತು ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಸಂತೋಷ್ ಹಾಗೂ ಮೂಡಬಿದ್ರಿ ಘಟಕದ ಚಂದ್ರಶೇಖರ್, ಮೂಲ್ಕಿ ಘಟಕದ ನಿಶಾ ಉಪಸ್ಥಿತರಿದ್ದರು.
- Tuesday
- November 26th, 2024